ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ’ಅರ್ಜುನ್ ರೆಡ್ಡಿ’ ತಮಿಳು ಅವತರಣಿಕೆ ’ವರ್ಮಾ’ ಇದೇ ಫೆಬ್ರವರಿ ೧೪ಕ್ಕೆ ತೆರೆಕಾಣಬೇಕಿತ್ತು. ಕಾಲಿವುಡ್ ಸ್ಟಾರ್ ವಿಕ್ರಂ ಪುತ್ರ ಧ್ರುವ ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಬರಬೇಕಿತ್ತು. ಹಿಂದೊಮ್ಮೆ ನಟ ವಿಕ್ರಂ ವೃತಿಬದುಕಿಗೆ ’ಸೇತು’ ಚಿತ್ರದೊಂದಿಗೆ ಬಹುದೊಡ್ಡ ಬ್ರೇಕ್ ನೀಡಿದ ಬಾಲಾ ಅವರು ’ವರ್ಮಾ’ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಈಗ ನಾಟಕೀಯ ಬೆಳವಣಿಗೆಯಲ್ಲಿ ಚಿತ್ರವನ್ನು ಸಂಪೂರ್ಣವಾಗಿ ಹೊಸದಾಗಿ ಚಿತ್ರಿಸುವುದಾಗಿ ನಿರ್ಮಾಣ ಸಂಸ್ಥೆ ಇ೪ ಎಂಟರ್ಟೇನ್ಮೆಂಟ್ ಹೇಳಿಕೊಂಡಿದೆ. ನಿರ್ದೇಶಕ ಬಾಲಾ ತಂಡದಿಂದ ಹೊರನಡೆದಿದ್ದು, ಬೇರೆ ನಿರ್ದೇಶಕರೊಬ್ಬರು ಹೊಸ ವರ್ಷನ್ ಸಾರಥ್ಯ ವಹಿಸಲಿದ್ದಾರೆ.
ಪೂರ್ಣಗೊಂಡಿರುವ ಚಿತ್ರವನ್ನು ವೀಕ್ಷಿಸಿದ ನಮಗೆ ಬೇಸರವಾಗಿದೆ. ಕೆಲವು ಕ್ರಿಯಾಶೀಲ ಕಾರಣಗಳಿಗಾಗಿ ಚಿತ್ರವನ್ನು ಸಂಪೂರ್ಣವಾಗಿ ಹೊಸದಾಗಿ ಚಿತ್ರಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಚಿತ್ರೀಕರಣವಾಗಿರುವ ಸಿನಿಮಾ ರಿಲೀಸ್ ಆಗುವುದಿಲ್ಲ. ಹೊಸದಾಗಿ ಶೂಟಿಂಗ್ ನಡೆಸಲಿದ್ದು, ಮೂಲ ತೆಲುಗು ಚಿತ್ರದ ಕತೆಗೆ ಬದ್ಧವಾಗಿರುತ್ತೇವೆ ಎಂದು ಇ೪ ಎಂಟರ್ಟೇನ್ಮೆಂಟ್ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಶಿಸ್ತಿನಿಂದ ಕೆಲಸ ಮಾಡಿ ಇದೇ ವರ್ಷದ ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಅವರದು. ಶೀರ್ಷಿಕೆ ಪಾತ್ರದಲ್ಲಿ ಧ್ರುವ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಹೊಸ ಯುವತಿ ಮೇಘಾ ಚೌಧರಿ ಇದ್ದಾರೆ. ಈಶ್ವರಿ ರಾವ್, ರೈಝಾ ವಿಲ್ಸನ್, ಆಕಾಶ್ ಪ್ರೇಮ್ಕುಮಾರ್, ಸಾಂಡ್ರಾ ಆಮಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
#
No Comment! Be the first one.