ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್‌ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ಮಾಡಿದೆ. ಆದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ದ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ!
ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿ ಉಪ ವಿಭಾಗದಲ್ಲಿ ಎಆರ್‌ಓ ಆಗಿರುವ ತಾರಕಾನಾಥ್ ಧ್ರುವ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮೂವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಲ್ಲಾ ಧ್ರುವ? ಆ ಸಂದರ್ಭದಲ್ಲಿ ಕೆಆರ್ ರಸ್ತೆಯ ಶಾಸ್ತ್ರಿ ನಗರ ಸುತ್ತಮುತ್ತ ಅಭಿಮಾನಿಗಳು ಆಳೆತ್ತರದ ಕಟೌಟ್ ಹಾಕಿದ್ದರು. ಈ ರಸ್ತೆಯ ತುಂಬಾ ಧ್ರುವ ಸರ್ಜಾರ ಕಟೌಟ್, ಬ್ಯಾನರ್ ಹಾಕಿ ಶುಭ ಕೋರಿದ್ದರು. ಇದು ಕಾನೂನು ಉಲ್ಲಂಘನೆ ಅಂತ ಆರೋಪಿಸಿ ತಾರಕಾನಾಥ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧವಾಗಿ ದ್ರುವ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಅಳವಡಿಸದಂತೆ ಆಗಸ್ಟ್ ೧೨ರಂದೇ ಕಟ್ಟುನಿಟ್ಟಿನ ಆದೇಶ ರವಾನೆ ಮಾಡಲಾಗಿತ್ತು. ಇದರ ಅರಿವಿದ್ದೋ ಇಲ್ಲದೆಯೋ ಧ್ರುವ ಅಭಿಮಾನಿಗಳು ಈ ಕಾನೂನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮವಾಗಿ ಇದೀಗ ಧ್ರವಾ ಸರ್ಜಾಜೆ ಹೊಸಾ ತಲೆನೋವು ಶುರುವಾಗಿದೆ. ದ್ರುವ ಇದೀಗ ತಮ್ಮ ಮೇಲೆ ಕಾನೂನು ಕ್ರಮ ಜರುಗುವ ಭೀತಿ ಎದುರಿಸುತ್ತಿದ್ದಾರೆ.
#