ಕಾರು ನಾಲ್ಕು ಪಲ್ಟಿ ಹೊಡೆದಿದ್ದು ಸುಳ್ಳು…
ಕಳೆದ ಕೆಲವು ದಿನಗಳಿಂದ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಬಯಲು ಸೀಮೆಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ನೆನ್ನೆ ತಡರಾತ್ರಿ ಮೂರೂವರೆ ತನಕ ಬಳ್ಳಾರಿಯ ತೋರಣಗಲ್ಲು ಬಳಿ ಚಿತ್ರೀಕರಣ ನಡೆದಿತ್ತು. ಶೂಟಿಂಗ್ ಮುಗಿಸಿ ವಾಪಾಸು ಕುಡ್ತನಿಗೆ ಬರುವ ಮಾರ್ಗ ಮಧ್ಯೆ ಮತ್ತೊಂದು ವಾಹನಕ್ಕೂ ಧೃವಾ ಪ್ರಯಾಣಿಸುತ್ತಿದ್ದ ವಾಹನಕ್ಕೂ ಸಣ್ಣ ಮುಖಾಮುಖಿಯಾಗಿತ್ತು. ಇದರಿಂದ ವಾಹನ ಒಂದಿಷ್ಟು ಪರಚಿಕೊಂಡಿರೋದು ಬಿಟ್ಟರೆ ಯಾರಿಗೂ ಯಾವುದೇ ರೀತಿಯ ಸಮಸ್ಯೆಗಳಾಗಿಲ್ಲ. ಆದರೆ ಈ ಬಗ್ಗೆ ಇಲ್ಲಸಲ್ಲದ ರೂಮರುಗಳು ಹಬ್ಬಿವೆ. ಕಾರು ನಾಲ್ಕು ಪಲ್ಟಿ ಹೊಡೀತು, ಅದೂ ಇದೂ ಎಂದೆಲ್ಲಾ ಸುದ್ದಿಗಳೆದ್ದಿವೆ. ಅವೆಲ್ಲವನ್ನೂ ಸ್ವತಃ ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಅಲ್ಲಗಳೆದಿದ್ದಾರೆ. ಸಣ್ಣ ಅಪಘಾತವಾಗಿದ್ದು ನಿಜ. ಆದರೆ ಧೃವ ಸರ್ಜಾ ಸೇರಿದಂತೆ ಎಲ್ಲರೂ ಸೇಫ್ ಆಗಿದ್ದಾರೆ. ಸದ್ಯ ಚಿತ್ರತಂಡದ ಎಲ್ಲರೂ ದೇವಸ್ಥಾನಕ್ಕೆ ಬಂದಿದ್ದೇವೆ ಎಂದು ಸಿನಿಬಜ಼್’ಗೆ ತಿಳಿಸಿದ್ದಾರೆ.