ಕಾಡಿನ ಹಾದಿಯಲ್ಲಿ ಹೆಜ್ಜೆಯಿರಿಸುವ ಕಾಲುಗಳು, ಮರ, ಕೊಂಬೆ, ಅದರಲ್ಲಿ ಜೋತುಬಿದ್ದ ತಲೆಬುರುಡೆ, ಐದಾರು ಜನರ ನಡುವೆ ಢುಮ್ಮಂತಾ ಸ್ಪೋಟಗೊಳ್ಳುವ ಒಂದು ಟಿಫನ್ ಕ್ಯಾರಿಯರ್ರು…. ಇಷ್ಟನ್ನೇ ಟ್ರೇಲರಿನಲ್ಲಿಟ್ಟು ೬-೫=೨ ಅನ್ನೋ ಸಿನಿಮಾ ಸೃಷ್ಟಿಸಿದ್ದ ಕ್ರೇಜ಼ು, ಬಿಡುಗಡೆಯ ನಂತರ ಬಾಕ್ಸಾಫೀಸಿನಲ್ಲೂ ಎಬ್ಬಿಸಿದ ಹವಾ ಯಾರೂ ಮರೆತಿರಲಿಕ್ಕಿಲ್ಲ.

ಕೃಷ್ಣ ಚೈತನ್ಯ ನಿರ್ಮಿಸಿದ್ದ ೬-೫=೨ ಚಿತ್ರವನ್ನು ಅಶೋಕ್ ಕೆ.ಎಸ್. ನಿರ್ದೇಶನ ಮಾಡಿದ್ದರು. ಇದೇ ಜೋಡಿ ಈಗ ಮತ್ತೆ ಒಂದಾಗಿ ರೂಪಿಸಿರುವ ಸಿನಿಮಾ ದಿಯಾ!

ಈ ಬಾರಿ ಕೂಡಾ ವಿನೂತನ ಟ್ರೇಲರಿನ ಮೂಲಕ ಅಶೋಕ್ ಕುತೂಹಲ ಮೂಡಿಸಿದ್ದಾರೆ. ಇದೇ ವಾರ ದಿಯಾ ಚಿತ್ರ ತೆರೆಗೆ ಬರುತ್ತಿದೆ. ಲೈಫ್ ಇಸ್ ಫುಲ್ ಆಫ್ ಸರ್ಪ್ರೈಸ್ ಎನ್ನುವ ಅಡಿ ಬರಹವನ್ನು ಈ ಚಿತ್ರಕ್ಕೆ ನೀಡಲಾಗಿದೆ. ಮೊದಲ ಸಿನಿಮಾ ಗೆಲುವು ಕಂಡ ನಂತರ ಬೇರೆ ಯಾರೇ ನಿರ್ದೇಶಕರಾಗಿದ್ದರೂ ತಕ್ಷಣ ಇನ್ನೊಂದಷ್ಟು ಅದೇ ಬಗೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ ನಿರ್ದೇಶಕ ಅಶೋಕ್ ತಾಳ್ಮೆ ವಹಿಸಿ, ಸಾಕಷ್ಟು ಸಮಯ ತೆಗೆದುಕೊಂಡು ಸಬ್ಜೆಕ್ಟು ರೆಡಿ ಮಾಡಿಕೊಂಡು ದಿಯಾ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈ ಟ್ರೇಲರ್ ನೋಡಿದರೆ, ಪ್ರೀತಿ, ಸಸ್ಪೆನ್ಸ್ ಮತ್ತು ಕ್ರೈಂ ಕಥಾ ಹಂದರ ಇದೆಯೆನ್ನುವ ಸೂಚನೆ ಸಿಕ್ಕಿದೆ. ಆದರೆ ನಿರ್ದೇಶಕ ಅಶೋಕ್ ಕಳೆದ ಬಾರಿಯಂತೆ ಈ ಸಲವೂ ಬಿಡುಗಡೆಗೂ ಮುನ್ನ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸಿನಿಮಾ ತೆರೆಗೆ ಬಂದಮೇಲೆ ಟಾಕ್ ಕ್ರಿಯೇಟ್ ಆಗಲಿ ಅನ್ನೋದು ಅವರ ಪ್ಲಾನಿರಬಹುದು.

ವಿಶಾಲ್ ವಿತ್ತರ್ ಮತ್ತು ಸೌರಭ್ ವಾಘ್ಮರೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ  ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ನವೀನ್ ರಾಜ್ ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನವಿದೆ. ಖುಷಿ ಮತ್ತು ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಅಂಬರ್ ಮತ್ತು ಪವಿತ್ರಾ ಲೋಕೇಶ್ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ.

CG ARUN

28ಕ್ಕೆ ಸಲಗ ಬರ್ತಿದೆ ಸೈಡು ಬಿಡಿ!

Previous article

ಪ್ರಜ್ವಲ್ ಬಗ್ಗೆ ನಿಶ್ವಿಕಾ ನಾಯ್ಡು ಏನಂದ್ರು ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *