ಮದುವೆಯ ನಂತರ ಅಷ್ಟೇನೂ ಸಿನಿಮಾ ಕಡೆ ಮುಖ ಮಾಡದ ದೂದ್ ಪೇಡಾ ದಿಗಂತ್ ದಶಕದ ನಂತರ ಟಾಲಿವುಡ್ ಗೆ ಹಾರಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಅವರು ತೆಲುಗಿನ ಇಮ್ರಾನ್ ಅಶ್ಮಿ ಎಂದೇ ಫೇಮಸ್ ಆಗಿರುವ ವಿಜಯ್ ದೇವರಕೊಂಡ ಅವರ ಜತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಹೌದು, 2008ರಲ್ಲಿ ತೆರೆಕಂಡ ಕನ್ನಡದ ಹಿಟ್ ಸಿನಿಮಾ ಮುಂಗಾರು ಮಳೆ, ತೆಲುಗು ರಿಮೇಕ್ ‘ವಾನ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಿಗಂತ್ ಮತ್ತೆ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಈ ಹೊಸ ಚಿತ್ರದ ಟೈಟಲ್ ಸೇರಿದಂತೆ ಹೆಚ್ಚಿನ ವಿವರಗಳು ಅಧಿಕೃತವಾಗಿ ಹೊರಬೀಳಬೇಕಿದೆ.
ಈ ಚಿತ್ರದಲ್ಲಿ ದಿಗಂತ್ ಬೈಕ್ ಬಗ್ಗೆ ಅತೀವ ಆಸಕ್ತಿ ಹೊಂದಿರುವಂತೆ ತೋರಿಸಲಿದ್ದಾರಂತೆ. ಹೀಗಾಗಿ ಅವರು ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳೋ ಸಾಧ್ಯತೆಯಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಾಲಿನಿ ಪಾಂಡೆ ಹಾಗೂ ಮಾಳವಿಕಾ ಮೋಹನ್ ಹೀರೋಯಿನ್ ಗಳಾಗಿದ್ದು, ಬಹುಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಇನ್ನು ಕನ್ನಡದಲ್ಲಿ ಟಿ ಆರ್ ಚಂದ್ರಶೇಖರ್ ನಿರ್ಮಾಣದ ಹುಟ್ಟುಹಬ್ಬದ ಶುಭಾಶಯಗಳು ಚಿತ್ರಕ್ಕೆ ದಿಗಂತ್ ಸಹಿ ಹಾಕಿದ್ದು ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣ ಕೂಡ ಮೇ ಮೊದಲ ವಾರದಿಂದ ಆರಂಭಗೊಳ್ಳಲಿದೆ. ಈ ನಡುವೆ ಬಾಲಿವುಡ್ನಲ್ಲಿ ರಾಮಾಯಣ ಕಥೆಯಾಧಾರಿಸಿದ ರಾಮ್ಯುಗ್ ಚಿತ್ರದಲ್ಲಿ ದಿಗಂತ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆಗಸ್ಟ್ನಲ್ಲಿ ರಿಲೀಸ್ ಆಗೋ ಪ್ಲಾನ್ ಇದೆ. ಒಂದೆಡೆ ಐಂದ್ರಿತಾ ರೈ ತನ್ನ ಮದುವೆ ಬಳಿಕ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದರೆ, ದಿಗಂತ್ ಕೂಡ ಮದುವೆಯ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ.
No Comment! Be the first one.