ಹಾರರ್ ದಿಗ್ಭಯಂ ಟ್ರೇಲರ್ ರಿಲೀಸ್!

ಹಾರರ್ ಸಸ್ಪೆನ್ಸ್ ಸಿನಿಮಾ ‘ದಿಗ್ಭಯಂ’ ಚಿತ್ರದ ಟ್ರೇಲರ್ ಲಾಂಚ್ ಆಗಿದ್ದು ಭಯಾನಕವಾಗಿ ಮೂಡಿ ಬಂದಿದೆ. ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹಾರರ್ ಹಾಗೂ ಸಸ್ಪೆನ್ಸ್ ಟಚ್ ಇರುವ ಸಿನಿಮಾಗಳು ತೆರೆ ಕಂಡಿವೆ. ಇನ್ನು ಪ್ರೇಕ್ಷಕರಿಗೆ ಮನ ಮುಟ್ಟುವ ರೀತಿ ಇನ್ನು ಭಯಾನಕತೆ ತೋರಿಸುವಲ್ಲಿ ಹಲವಾರು ಸಿನಿಮಾಗಳು ಯಶಸ್ವಿಯಾಗಿವೆ. ಕನ್ನಡ ಸಿನಿಮಾ ರಂಗದಲ್ಲಿ ಇದೇ ಭರವಸೆಯನ್ನಿಟ್ಟುಕೊಂಡು ಹೊಸಬರ ತಂಡವೊಂದು ‘ದಿಗ್ಭಯಂ’ ಹೊತ್ತು ಬರುತ್ತಿದೆ.

ಈ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಬಹುತೇಕ ಹೊಸಬರನ್ನೇ ಕಟ್ಟಿಕೊಂಡು ಚಿತ್ರ ನಿರ್ದೇಶನಕ್ಕೆ ಹೊರಟಿರುವ ಅಮಿತ್ ಅವರ ಚೊಚ್ಚಲ ಸಿನಿಮಾ ಇದಾಗಿದೆ. ಇನ್ನು ನಿರ್ದೇಶನದ ಜೊತೆಗೆ ಸಿನಿಮಾದ ನಾಯಕ ನಟನಾಗಿಯೂ ನಟಿಸಿದ್ದಾರೆ. ಯುವಜನತೆ ಹೇಗೆ ಹಾದಿ ತಪ್ಪುತ್ತಿದೆ ಮತ್ತು ಮುಂದೆ ಅದರ ಪರಿಣಾಮಗಳೇನಾಗುತ್ತವೆ ಎಂಬುದನ್ನು ಥ್ರಿಲ್ಲರ್ ಸಸ್ಪೆನ್ಸ್ ಹಾರರ್ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಅಮಿತ್. ಅಮಿತ್ ,ಲೋಕನಾಥ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Posted

in

by

Tags:

Comments

Leave a Reply