ಪಾಪ್​ ಸಿಂಗರ್​ ಡಿಂಗ್ ​ಚಾಕ್​ ಪೂಜ​ ಈಗ  ತಮ್ಮ ಹೊಸ ಹಾಡು ‘ನಾಚ್​ ಕೆ ಪಾಗಲ್​’ ಹಾಡಿನಿಂದಾಗಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಪೂಜಾ ಅವರ ಹೊಸ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಸದಾ ತಮ್ಮ ವಿಭಿನ್ನವಾದ ಹಾಡಿನ ಶೈಲಿಯಿಂದಲೇ ಸದ್ದು ಮಾಡುವ ಪೂಜಾರ ಈ ಹೊಸ ನಿರೀಕ್ಷೆಗೂ ಮೀರಿದ ಹಿಟ್ಸ್ ಪಡೆಯುತ್ತಿದ್ದಂತೆ ಅಪಹಾಸ್ಯಕ್ಕೆ ಒಳಗಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪೂಜಾರ ಈ ಹೊಸ ಹಾಡನ್ನು ಕೇಳಿ-ನೋಡಿದವರು ಇದನ್ನು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಈಗಾಗಲೇ ಈ ಹಾಡಿಗೆ 27 ಲಕ್ಷ ವೀಕ್ಷಣೆ ಸಿಕ್ಕಿದೆ. ಆದರೆ ಈ ಹಾಡು ಜನರ ಮನರಂಜಿಸುತ್ತದೆಯೋ ಇಲ್ಲವೋ ಆದರೆ, ಈ ಹಾಡಿಗೆ ಬರುತ್ತಿರುವ ಮೀಮ್ಸ್​ ಅನ್ನು ನೆಟ್ಟಿಗರು ಎಂಜಾಯ್​ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಪೂಜಾ ಜತೆ ಇಬ್ಬರು ಮಕ್ಕಳು ಹಾಗೂ ಇಬ್ಬರು ಹುಡುಗಿಯರು ಕಾಣಿಸಿಕೊಂಡಿದ್ದಾರೆ. ಒಂದು ಮಗು ಸ್ಪೈಡರ್​ ಮ್ಯಾನ್​ ಮತ್ತು ಮತ್ತೊಂದು ಮಗು ಭೂತದ ವೇಷದಲ್ಲಿದೆ. ಈ ಹಾಡನ್ನು ನೋಡಿದ ನೋಡುಗರಲ್ಲಿ ಸಾಕಷ್ಟು ಮಂದಿ ನೆಗೆಟೀವ್​ ಕಮೆಂಟ್​  ಮಾಡುತ್ತಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶಾಹಿದ್ ಕಪೂರ್ ಗೆ ಮರು ಜೀವಕೊಟ್ಟ ಕಬೀರ್ ಸಿಂಗ್!

Previous article

ಬಿಕಿನಿಯಲ್ಲಿ ತಳತಳಿಸಿದ ಲಕ್ಷ್ಮೀ ರೈ!

Next article

You may also like

Comments

Leave a reply

Your email address will not be published.