ಶೀ ರ್ಷಿಕೆಯಲ್ಲೇ ವಿಶೇಷತೆ ಹೊಂದಿರುವ ಚಿತ್ರ ’ಡಿಂಗ’ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಸಲಹೆ, ಪ್ರೋತ್ಸಾಹ ನೀಡುತ್ತಿದ್ದಾರೆ ಅಂತಾ ಸ್ವತಃ ಚಿತ್ರತಂಡ ಹೇಳಿಕೊಂಡಿದೆ. ಇವರದ್ದೆ ಸಾಹಿತ್ಯದ ಗೀತೆಯೊಂದು ವೈರಲ್ ಆಗಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.  ಇತ್ತೀಚೆಗೆ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸಿದ್ದರು.  ಐ ಫೋನಿನಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಈ ಸಿನಿಮಾದ ಒಂದು ಗೀತೆ ಹಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಜೀವನದಲ್ಲಿ ಹೀರೋ ಆದವರು ಮಾತ್ರ ಇಂತಹ ಕೆಲಸ ಮಾಡಲು ಸಾದ್ಯವೆಂದು ಜನ್ಯಾ  ಅಭಿಪ್ರಾಯ ಪಟ್ಟರು. ಇವರ ನುಡಿಗೆ ಧ್ವನಿಗೂಡಿಸಿದ ನಾಗೇಂದ್ರಪ್ರಸಾದ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಡಾ.ಮೂಗೂರು ಮಧು ದೀಕ್ಷಿತ್ ಕ್ರಾಂತಿಕಾರಿ ಆಲೋಚಕರು. ಪುರೋಹಿತಿರ ಕ್ರಿಕೆಟ್ ಪಂದ್ಯ ಏರ್ಪಾಟು ಮಾಡಿಸಿದ್ದರು. ಆಧ್ಯಾತ್ಮ-ವಿಜ್ಞಾನ ಎರಡನ್ನೂ ವೈಜ್ಘಾನಿಕವಾಗಿ ಹೇಳಿಕೊಡುತ್ತಾರೆ. ನಾಯಿ ಬಗ್ಗೆ ತಾಯಿತರ ಪ್ರೀತಿ ಇಟ್ಟುಕೊಂಡು ಹಾಡು ಬರೆಯಲಾಗಿದೆ ಎಂದರು.

ಐವತ್ತೈದು ಲಕ್ಷ ಖರ್ಚು ಆಗಿದೆ. ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ. ಭಾರತದಲ್ಲಿ ಇದೇ ಮೊದಲು ಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂತಹ ಸಾಹಸಕ್ಕೆ ಧೈರ್ಯ ಮಾಡಿರುವ ಅಭಿಷೇಕ್ ಜೈನ್ ರಚನೆ, ನಿರ್ದೇಶನ ಮತ್ತು ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥಾನಾಯಕ ಕ್ಯಾನ್ಸರ್ ರೋಗಿ. ಸಾಯುವ ಮುಂಚೆ ತಾನು ಸಾಕಿರುವ ನಾಯಿಯನ್ನು ತನ್ನಷ್ಟೇ ಅದನ್ನು ಪ್ರೀತಿ ಮಾಡುವ ವ್ಯಕ್ತಿಗೆ ಕೊಡಬೇಕೆಂಬುದು ಅವನ ಕೊನೆ ಆಸೆಯಾಗಿರುತ್ತದೆ. ಕೇವಲ ಶ್ವಾನವನ್ನು ಇಷ್ಟಪಟ್ಟರೆ ಸಾಲದು. ಅದಕ್ಕೂ ಅವರಿಗೂ ಜಾತಕ, ಬ್ಲಡ್ ಗ್ರೂಪ್ ಸೇರಿದಂತೆ ಬೇರೆರೀತಿಯ ಹೊಂದಾಣಿಕೆಗಳು ಸರಿಹೊಂದಬೇಕು. ಇವೆಲ್ಲವನ್ನು ಆವನು ಹುಡುಕುವುದಕ್ಕೆ ಏನೆಲ್ಲಾ ಕಷ್ಟಪಡುತ್ತಾನೆ ಎಂಬುದು ಸಿನಿಮಾದ ತಿರುಳಾಗಿದೆ.

ಆರ್ವ ಗೌಡ ನಾಯಕ. ಪಾತ್ರಕ್ಕೆ ತಕ್ಕಂತೆ ಸಿಗರೇಟು ಬಳಕೆ, ಪಬ್‌ಗೆ ಹೋಗುವ ಹವ್ಯಾಸ, ಆಗತಾನೆ ಪ್ರೀತಿಗೆ ಬಿದ್ದು ಭಾವನೆಗಳನ್ನು ನೋಡಿರುವ, ಏಳು ಬೀಳುಗಳನ್ನು ಕಂಡಿರುವ. ಮದ್ಯ ವಯಸ್ಸಿನ ಅನುಭವಿ ಮಹಿಳೆ ಹೀಗೆ ಎರಡು ಶೇಡ್‌ಗಳಲ್ಲಿ ಅನುಷಾ ರೋಡ್ರಿಗಸ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಗಣೇಶ್ ರಾವ್, ರಾಘು ರಮಣಕೊಪ್ಪ, ನಾಗೇಂದ್ರ ಶಾ, ವಿಜಯ್ ಈಶ್ವರ್ ನಟನೆ ಇದೆ. ಶುದ್ದೋರಾಯ್ ಸಂಗೀತಕ್ಕೆ ನವೀನ್‌ಸಜ್ಜು, ಸಂಜಿತ್ ಹೆಗ್ಡೆ, ಅನುರಾಧ ಭಟ್ ಕಂಠದಾನ ಮಾಡಿದ್ದಾರೆ. ಹನ್ನೊಂದು ಮಂದಿ ಸಿನಿಮಾ ಮೋಹಿಗಳು  ಶ್ರೀ ಮಾಯಾಕರ ಪ್ರೊಡಕ್ಷನ್ಸ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹಾಟ್ ಹುಡುಗಿಯ ಡೆಡ್ಲಿ ಅಫೇರ್!

Previous article

ಲವಲವಿಕೆಯ ಲವ್ ಮಾಕ್ಟೇಲ್!

Next article

You may also like

Comments

Leave a reply

Your email address will not be published. Required fields are marked *