ಕ್ಲಬ್ ಸಾಂಗ್, ಐಟಂ ಸಾಂಗ್ ನ ಮೂಲಕ ಚಂದನ ವನದಲ್ಲಿ ಹೆಸರು ಮಾಡಿದ್ದ ಡಿಸ್ಕೋ ಶಾಂತಿ ತನ್ನ ಪ್ರತಿ ನೃತ್ಯದಲ್ಲಿಯೂ ಪಡ್ಡೆ ಹುಡುಗರ ಮೈ ಬಿಸಿಯೇರುವಂತೆ ಮಾಡಿದ್ದವರು. ಅಂಜದ ಗಂಡು, ಕುರುಕ್ಷೇತ್ರ, ಸಾಂಗ್ಲಿಯಾನ, ಯುದ್ಧಕಾಂಡ ಸೇರಿದಂತೆ ಬಹುತೇಕ ಸಿನಿಮಾದಲ್ಲಿ ಡಿಸ್ಕೋ ನೃತ್ಯದ ಮೂಲಕವೇ ಸಿನಿರಸಿಕರ ಮನಗೆದ್ದಿದ್ದರು. ಸದ್ಯ ಡಿಸ್ಕೋ ಶಾಂತಿಯ ಮಗ ಮೇಘಾಂಶ್ ಟಾಲಿವುಡ್ ಗೆ ಎಂಟ್ರಿ ಹಾಕುತ್ತಿದ್ದಾರೆ.
ಹೌದು ಮೇಘಾಂಶ್ ಟಾಲಿವುಡ್ ನ ರಾಜಧೂತ್ ಎನ್ನುವ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ರಾಜ್ ಧೂತ್ ಮಾಸ್ ಹಾಗೂ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಸಿನಿಮಾದಲ್ಲಿ ಮೇಘಾಂಶ್ ಪಕ್ಕಾ ಲವರ್ ಬಾಯ್ ಗೆಟಪ್ ನಲ್ಲಿ ಮಿಂಚಲಿದ್ದಾರೆ. ಲಕ್ಷ್ಯ ಬ್ಯಾನರ್ ನಲ್ಲಿ ಸತ್ಯನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಕಾರ್ತಿಕ್ ಮತ್ತು ಅರ್ಜುನ್ ಆಕ್ಯನ್ ಕಟ್ ಹೇಳಲಿದ್ದಾರೆ.
No Comment! Be the first one.