ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ದಿಶಾ ಪಟಾಣಿ ಅಭಿಮಾನಿಗಳಿಗಾಗಿ ಒಂದರ ಹಿಂದೆ ಒಂದು ಹಾಟ್ ಫೊಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಬರಫೂರ ಸಕಾರಾತ್ಮಕ ಕಮೆಂಟುಗಳನ್ನು ಪಡೆದುಕೊಂಡರೆ ಮತ್ತೂ ಕೆಲವೊಮ್ಮೆ ಟ್ರೋಲಿಗೆ ಒಳಗಾದ ಉದಾಹರಣೆಗಳು ಸಾಕಷ್ಟಿದೆ. ಸದ್ಯ ದಿಶಾ ಪಟಾಣಿ ಮತ್ತೊಂದು ಹಾಟ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಶೇರ್ ಮಾಡಿರುವ ಫೊಟೋದಲ್ಲಿ ದಿಶಾ ಬಾತ್ ಟಬ್ ನಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಲ್ಲದೇ ಸ್ವತಃ ದಿಶಾ ಅವರೇ ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ದಿಶಾ ಪಠಾಣಿ ಮಿಂಚಿದ್ದು, ಮತ್ತೊಂದು ಫೋಟೋದಲ್ಲಿ ಅವರು ಧರಿಸಿದ್ದ ಉಂಗುರ ಹಾಗೂ ಆಭರಣ ಸಖತ್ ಹೈಲೈಟ್ ಆಗಿದೆ. ಸದಾ ಬಿಕಿನಿಯಲ್ಲಿಯೇ ಫೋಸ್ ಕೊಡುವ ದಿಶಾ ಸದ್ಯ ಶೇರ್ ಮಾಡಿರುವ ಫೊಟೋ ಅಭಿಮಾನಿಗಳು ಬಾತ್ ಟಬ್ ನಲ್ಲಿ ಸ್ನಾನ ಮಾಡುವಂತೆ ಫೀಲ್ ಕೊಟ್ಟಿದ್ದಂತೂ ಸತ್ಯವೇ.