ಯುಎನ್ ನ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ಕಾರ್ಯಕ್ರಮದ ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಜಾ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ, ಇ-ಕಾಮರ್ಸ್ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್ ಲೀ, ಬ್ರಿಟಿಷ್ ನಟ ರಿಚರ್ಡ್ ಕರ್ಟಿಸ್ ಸೇರಿದಂತೆ, 17 ಖ್ಯಾತನಾಮರನ್ನು ವಿಶ್ವಸಂಸ್ಥೆಯ ಈ ಅಭಿಯಾನಕ್ಕೆ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಅವರು ರಾಯಭಾರಿಗಳ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಕಚೇರಿ ತಿಳಿಸಿದೆ.

ಈ ಸಂಬಂಧ ನಟಿ ದಿಯಾ ಕೂಡ ತಾವು ಆ ಜವಾಬ್ದಾರಿಯನ್ನಯ ಹೊರಲು ಸಜ್ಜಾಗಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್ ಒಪ್ಪಂದದಲ್ಲಿ ಸುಸ್ಥಿರ ಅಭಿವೃದ್ಧಿಗೆ ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಬಗ್ಗೆ ಮಾತನಾಡಿರುವ ನಟಿ ದಿಯಾ ಮಿರ್ಜಾ “ವಿಶ್ವಸಂಸ್ಥೆಯು ನನಗೆ ನೀಡಿರುವ ಅಭೂತಪೂರ್ವ ಗೌರವಕ್ಕೆ ನಾನು ಅಭಾರಿಯಾಗಿದ್ದೇನೆ. ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ಈ ಅಭಿಯಾನಕ್ಕೆ ನಾನು ಸೂಕ್ತ ನ್ಯಾಯ ಒದಗಿಸಲಿದ್ದೇನೆ” ಎಂದು ನಟಿ ದಿಯಾ ಮಿರ್ಜಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

CG ARUN

ದ್ರೋಣನಾದ ಹ್ಯಾಟ್ರಿಕ್ ಹೀರೋ!

Previous article

ರತ್ನ ಮಂಜರಿ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್!

Next article

You may also like

Comments

Leave a reply

Your email address will not be published. Required fields are marked *