ಅನಿಮಲ್ ವೆಲ್ ಫೇರ್ ಬೋರ್ಡೆಂಬ ಕಿತಾಪತಿ ಸಂಸ್ಥೆಯ ಕಾಟದ ನಡುವೆಯೂ ಸಿನಿಮಾಗಳಲ್ಲಿ ಪ್ರಾಣಿಗಳು ಪಾತ್ರ ನಿರ್ವಹಿಸುತ್ತಿವೆ. ಕನ್ನಡ ಮಾತ್ರವಲ್ಲ, ಇವತ್ತು ಇಂಡಿಯಾದ ಯಾವುದೇ ಭಾಷೆಯ ಸಿನಿಮಾಗಳಲ್ಲಿ ನಾಯಿ ಸೇರಿದಂತೆ ಪ್ರಾಣಿಗಳಿರುವ ಸಿನಿಮಾಗಳು ಹೆಚ್ಚಾಗುತ್ತಿವೆ.

ಕನ್ನಡದಲ್ಲೇ ಗಮನಿಸಿ… ಈವಾರ ಬಿಡುಗಡೆಯಾಗಿರುವ ನಾನು ಮತ್ತು ಗುಂಡ, ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಮತ್ತು ಡಿಂಗ ಸಿನಿಮಾಗಳಲ್ಲಿ ಕೂಡಾ ನಾಯಿಯ ಪಾತ್ರಗಳು ಪ್ರಧಾನವಾಗಿವೆ. ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಬರಲಿರುವ ಚೇಜ಼್ ಸಿನಿಮಾದಲ್ಲಿ ಕೂಡಾ ಡಾಗ್ ಕ್ಯಾರೆಕ್ಟರ್ ಇದ್ದು, ಪಳಗಿದ ನಾಯಿಯನ್ನು ಕರೆತಂದು ಆಕ್ಟ್ ಮಾಡಿಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ರಕ್ಷಿತ್ ಶೆಟ್ಟಿಯ ಮುಂದಿನ ಚಿತ್ರ ಚಾರ್ಲಿ 777ನಲ್ಲಿ ಕೂಡಾ ನಾಯಿಗೆ ಒಳ್ಳೇ ರೋಲಿದೆ.

ತಾಯಿ ಸೆಂಟಿಮೆಂಟಿನ ಸಿನಿಮಾಗಳು ಬೆಲೆ ಕಳೆದುಕೊಳ್ಳುತ್ತಿದ್ದಂತೇ, ನಾಯಿ ಸೆಂಟಿಮೆಂಟಿನ ಚಿತ್ರಗಳಿಗೆ ಒಳ್ಳೇ ವ್ಯಾಲ್ಯೂ ಬಂದಿದೆ. ಸಿನಿಮಾದಲ್ಲಿ ಪ್ರಾಣಿಗಳಿದ್ದರೆ ಮಕ್ಕಳ ಸಮೇತ ಫ್ಯಾಮಿಲಿ ಆಡಿಯನ್ಸ್ ಥೇಟರಿಗೆ ಬರುತ್ತಾರೆ ಅನ್ನೋದೇನೋ ಹೌದು. ಅದರ ಜೊತೆಗೆ ಡಬ್ಬಿಂಗ್ ರೈಟ್ಸ್ ಸೇಲ್ ಮಾಡುವಲ್ಲಿ ಕೂಡಾ ಇದು ಸಹಕಾರಿಯಾಗಿದೆ. ಸಿನಿಮಾದಲ್ಲಿ ಫೈಟ್ಸ್ ಇದ್ದಷ್ಟೂ ಹೇಗೆ ಡಬ್ಬಿಂಗ್ ರೇಟು ಜಾಸ್ತಿಯಾಗುತ್ತದೋ? ಹಾಗೆಯೇ ನಾಯಿ ಅಥವಾ ಇನ್ಯಾವುದೇ ಪ್ರಾಣಿಗಳಿದ್ದರೂ ಹೆಚ್ಚು ಬೆಲೆ ಸಿಗುತ್ತದಂತೆ.

ಕನ್ನಡ ಸಿನಿಮಾಗಳಲ್ಲಿ ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಇದೂ ಒಂದು ಕಾರಣವಿರಬಹುದು!

CG ARUN

ವಸಿಷ್ಠನ ನಸೀಬು ವಕ್ರವಾಗಿಸಿದ ನಾಗತಿಹಳ್ಳಿ!

Previous article

28ಕ್ಕೆ ಸಲಗ ಬರ್ತಿದೆ ಸೈಡು ಬಿಡಿ!

Next article

You may also like

Comments

Leave a reply

Your email address will not be published. Required fields are marked *