ಡಾಲಿ ಧನಂಜಯ್ ಇದೀಗ ಭೈರವನಾಗಿ ಅವತರಿಸಿದ್ದಾರೆ. ರಾಮ್ಗೋಪಾಲ್ ವರ್ಮಾ ನಿರ್ಮಾಣ ದ ಭೈರವ ಗೀತಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗೆ ಈ ಚಿತ್ರ ಗೆಲುವಿನತ್ತ ಮುನ್ನುಗ್ಗುತ್ತಿರುವಾಗಲೇ ಧನಂಜಯ್ ಬಹು ನಿರೀಕ್ಷಿತ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ದುನಿಯಾ ಸೂರಿ ನಿರ್ದೇಶನದ ಪಾಪ್ಕಾರ್ನ್ ಮಂಕಿ ಟೈಗರ್ ತಿಂಗಳುಗಳ ಹಿಂದೆಯೇ ಟೇಕಾಫ್ ಆಗಿತ್ತು. ಭೈರವಗೀತಾ ನಡುವೆಯೇ ಧನಂಜಯ್ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೀಗ ಡಾಲಿ ಸಂಪೂರ್ಣವಾಗಿ ಮಂಕಿ ಟೈಗರ್ ಧ್ಯಾನದಲ್ಲಿದ್ದಾರೆ. ಅವರೇ ತಮ್ಮ ಎರಡು ಲುಕ್ಗಳ ಫೋಟೋವನ್ನೂ ಅನಾವರಣಗೊಳಿಸಿದ್ದಾರೆ.
ಒಂದರಲ್ಲಿ ಬಿಂದಾಸ್ ಲವರ್ ಬಾಯ್ ಲುಕ್ಕಲ್ಲಿರೋ ಧನಂಜಯ್ ಮತ್ತೊಂದರಲ್ಲಿ ದಾಡಿ ಬಿಟ್ಟ ರಗಡ್ ಲುಕ್ಕಿನಲ್ಲಿದ್ದಾರೆ. ಇವೆರಡೂ ಫೋಟೋಗಳನ್ನು ಕಂಡು ಡಾಲಿಯ ಸಮಸ್ತ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಈ ಫೋಟೋಗಳ ಹಿನ್ನೆಲೆಯಲ್ಲಿಯೇ ಡಾಲಿಯ ಪಾತ್ರ ಯಾವ ಥರ ಇದ್ದೀತೆಂಬ ಚರ್ಚೆಯೂ ಆರಂಭವಾಗಿದೆ.
ಈ ಮೂಲಕ ದುನಿಯಾ ಸೂರಿ ಮತ್ತು ಧನಂಜಯ್ ಜೋಡಿ ಮತ್ತೊಂದು ಗೆಲುವು ದಕ್ಕಿಸಿಕೊಳ್ಳಲಿದ್ದಾರೆಂಬ ಮಾತು ಆರಂಭದಲ್ಲಿಯೇ ಕೇಳಿ ಬಂದಿತ್ತು. ಹೀರೋ ಆದರೂ ಸರಿಯಾದೊಂದು ಬ್ರೇಕ್ ಸಿಕ್ಕದೆ ಕಂಗಾಲಾಗಿದ್ದವರು ಧನಂಜಯ್. ಅಂಥಾ ಹೊತ್ತಲ್ಲಿ ಟಗರು ಚಿತ್ರದ ನೆಗೆಟಿವ್ ಪಾತ್ರದ ಮೂಲಕವೇ ಹೀರೋಗಿರಿ ತಂದುಕೊಟ್ಟವರು ಸೂರಿ. ಇದೀಗ ಅದೇ ಸೂರಿ ಧನಂಜಯ್ ಅವರನ್ನ ಹೀರೋ ಆಗಿ ಮಿರುಗಿಸಲು ತಯಾರಾಗಿದ್ದಾರೆ.
#
No Comment! Be the first one.