ಶಿವಣ್ಣ ಅಭಿನಯದ ಟಗರು ಚಿತ್ರದಲ್ಲಿ ಡಾಲಿ ಎಂಬ ಪಾತ್ರದಲ್ಲಿ ಮಿಂಚಿದ್ದವರು ಧನಂಜಯ್. ಹೀರೋಗೆ ಸರಿಸಮನಾಗಿ ವಿಲನ್ ಪಾತ್ರವೊಂದು ಪ್ರಸಿದ್ಧಿಯಾದ ಅಚ್ಚರಿಗೆ ಟಗರು ಸಾಕ್ಷಿಯಾದದ್ದು ಈಗ ಇತಿಹಾಸ. ಈ ಸಿನಿಮಾ ಮೂಲಕವೇ ಧನಂಜಯ್ ಅಭಿಮಾನಿಗಳಾಗಿದ್ದವರಿಗೆಲ್ಲ ಮತ್ತೆ ಅವರನ್ನು ಡಾಲಿಯಾಗಿ ನೋಡೋ ಸದಾವಕಾಶ ಬಂದೊದಗಿದೆ!
ಡಾಲಿ ಎಂಬ ಕ್ಯಾರೆಕ್ಟರ್ ಫೇಮಸ್ ಆಗುತ್ತಲೇ ಅದೇ ಟೈಟಲ್ಲಿನ ಚಿತ್ರವೊಂದು ತೆರೆ ಕಾನೋ ಮಾತಾಗಿತ್ಗತು. ಅದೀಗ ನಿಜವಾಗಿದೆ! ಎರಡನೇ ಸಲ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಯೋಗೇಶ್ ನಾರಾಯಣ್ ಡಾಲಿಯನ್ನು ನಿರ್ಮಾಣ ಮಾಡಲಿದ್ದಾರೆ. ಗಣಂಪ ಎಂಬ ಪಕ್ಕಾ ಮಾಸ್ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಭು ಶ್ರೀನಿವಾಸ್ ಡಾಲಿಯನ್ನು ನಿರ್ದೇಶನ ಮಾಡಲಿದ್ದಾರೆ. ಇದೇ ತಿಂಗಳ ಹನ್ನೆರಡರಂದು ಇದರ ಟೈಟಲ್ ಅನಾವರಣಗೊಳ್ಳುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದೆ.
ಈ ಚಿತ್ರದಲ್ಲಿ ಧನಂಜಯ್ ಎರಡು ಶೇಡಿನಲ್ಲಿ ಅಬ್ಬರಿಸಲಿದ್ದಾರಂತೆ. ಸದ್ಯಕ್ಕೆ ಅವರು ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ಮುಗಿದಾಕ್ಷಣವೇ ಡಾಲಿಗೆ ಚಾಲನೆ ಸಿಗಲಿದೆ.
#