ಟಗರು ಸಿನಿಮಾದ ನಂತರ ಸೃಜನಶೀಲ ನಿರ್ದೇಶಕ ಸೂರಿ ಮತ್ತೊಂದು ಡಿಫರೆಂಟ್ ಟೈಟಲ್ ನ ಸಿನಿಮಾವೊಂದರಲ್ಲಿ ಬ್ಯುಸಿಯಾಗಿರುವುದು ಆ ಸಿನಿಮಾಕ್ಕೆ ಡಾಲಿ ಧನಂಜಯ್ ನಾಯಕನಾಗಿರುವುದು, ಆ ಚಿತ್ರಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂದು ಹೆಸರಿಟ್ಟಿರುವುದು ನಿಮಗೆಲ್ಲ ತಿಳಿಯದ ಸಂಗತಿಯೇನಲ್ಲ. ಇನ್ನು ಪ್ರಪ್ರಥಮ ಬಾರಿಗೆ ರಿಲೀಸ್ ಆದ ಧನಂಜಯ್ ನ ಹೊಸ ಗೆಟಪ್ ಅಭಿಮಾನಿಗಳಿಗೆ ಕಿಕ್ಕೇರುವಂತೆ ಮಾಡಿದಲ್ಲದೇ ತಲೆ ಕೆರೆದುಕೊಳ್ಳುವಂತೆಯೂ ಮಾಡಿತ್ತು.
ಈಗಾಗಲೇ ಚಿತ್ರತಂಡ ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ಮುಂಬೈಗೂ ಹಾರಿತ್ತು. ಅದಾದಮೇಲೆ ಚಿತ್ರ ನಿರ್ಮಾಣ ಯಾವ ಹಂತದಲ್ಲಿದೆ ಎಂಬ ಸುದ್ದಿ ಎಲ್ಲಿಯೂ ಲೀಕ್ ಆಗಿರಲಿಲ್ಲ. ಸದ್ಯದ ಸುದ್ದಿ ಏನಂದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಇದೇ ತಿಂಗಳ 16ರಿಂದ ಮತ್ತೊಂದು ಶೆಡ್ಯೂಲ್ ಶೂಟಿಂಗ್ ಆರಂಭವಾಗಲಿರುವ ವಿಚಾರವನ್ನು ಚಿತ್ರತಂಡವೇ ತಿಳಿಸಿದೆ. ಆ್ಯಕ್ಷನ್, ಕ್ರೈಮ್, ಥ್ರಿಲ್ಲರ್ ಸಿನಿಮಾದಲ್ಲಿ ಡಾಲಿ ಹಿಂದೆಂದೂ ಅಭಿನಯಿಸಿದ ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಾಲಿ ಹೊಸ ಲುಕ್ಕಿಗೆ ಅಭಿಮಾನಿಗಳು ಬೆರಗಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಕೆರಳಿಸಿದೆ.
No Comment! Be the first one.