60 ರಿಂದ 70ರ ದಶಕಗಳಲ್ಲಿ ಹಾಲಿವುಡ್ ನಲ್ಲಿ ತಮ್ಮ ಅದ್ಬುತ ನಟನೆ ಮತ್ತು ಸೌಂದರ್ಯದಿಂದಲೇ ಸಿನಿಪ್ರಿಯರನ್ನ ಪಟಾಯಿಸಿದ್ದ ನಟಿ ಡೋರಿಸ್ ಡೇ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಹಾಲಿವುಡ್ ನ ಗರ್ಲ್ ನೆಕ್ಸ್ಟ್ ಡೋರ್ ಎಂದರೆ ಪಕ್ಕದ್ಮನೆ ಹುಡುಗಿ ಎಂಬ ಖಾಯಂ ಇಮೇಜ್ ಹೊಂದಿದ್ದ ಇವರು ಐ ವಿಲ್ ಸೀ ಯು ಇನ್ ಮೈ ಡ್ರೀಮ್ಸ್, ಲಕ್ಕಿ ಮಿ, ಲವ್ ಮಿ ಆರ್ ಲೀವ್ ಮಿ, ಜೂಲಿ, ದಿ ಟನೆಲ್ ಆಫ್ ಲವ್ ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.
ಹಾಡುಗಾರ್ತಿಯಾಗಿಯೂ ಪ್ರಸಿದ್ಧರಾಗಿದ್ದ ಡೋರಿಸ್ ಡೇ 50ರ ದಶಕದಲ್ಲಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು. ಹಾಲಿವುಡ್ನ ಅತ್ಯಂತ ಯಶಸ್ವಿ ನಟಿಯಾಗಿರುವ ಅವರು ಕಿರುತೆರೆಯಲ್ಲೂ ಅನೇಕ ಜನಪ್ರಿಯ ಶೋಗಳಿಗೆ ಹೋಸ್ಟ್ ಆಗಿದ್ದವರು. ತಮಗೆ ಅಂತ್ಯಸಂಸ್ಕಾರ, ಸಂತಾಪ ಸೂಚನೆ ಇತ್ಯಾದಿಗಳನ್ನು ಏರ್ಪಡಿಸಬಾರದು ಮತ್ತು ಸ್ಮಾರಕ ನಿರ್ಮಿಸಬಾರದು ಎಂದು ಡೋರಿಸ್ ಈ ಮೊದಲೇ ಸೂಚಿಸಿರುವ ಕಾರಣ ಅವರ ಅಂತ್ಯಸಂಸ್ಕಾರ ನಡೆಸಲಾಗಿಲ್ಲ.
No Comment! Be the first one.