ರಿಹರ ಪಿಕ್ಚರ್ಸ್ ಲಾಂಛನದಲ್ಲಿ, ಪ್ರವೀಣ್ ರೆಡ್ಡಿ ನಿರ್ಮಿಸಿ, ರಾಜೇಶ್ ಆನಂದಲೀಲಾ ನಿರ್ದೇಶಿಸುತ್ತಿರುವ ಸಿನಿಮಾ ಡಾ. 56.
ಪ್ರಿಯಾಮಣಿ ಪ್ರಧಾನಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ಪ್ರವೀಣ್ ರೆಡ್ಡಿ ಕತೆ, ಚಿತ್ರಕತೆ, ಬರೆದು ನಿರ್ಮಾಣವನ್ನೂ ಮಾಡುತ್ತಿದ್ದಾರೆ. ನಾಯಕನಟ ಪ್ರವೀಣ್ ರೆಡ್ಡಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಮೊನ್ನೆ ಡಾ. ೫೬ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.
ವಿಶೇಷವೆಂದರೆ ಇದು ಪ್ರಿಯಾಮಣಿ ಅಭಿನಯದ ೫೬ನೇ ಚಿತ್ರವೂ ಆಗಿರುವುದು ಕಾಕತಾಳೀಯವಾಗಿದೆ. ಸೈ-ಫೈ ಆಕ್ಷನ್ ಥ್ರಿಲ್ಲರ್ ಜಾನರಿನ ಕತೆಯ ಜೊತೆಗೆ ಮರ್ಡರ್ ಮಿಸ್ಟರಿಯ ಎಳೆ ಕೂಡಾ ರೋಚಕವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಿಯಾಮಣಿ ಈ ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದಾರೆ. ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ವಿಶ್ವ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಣದ ಈ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತವಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ, ಪ್ರವೀಣ್, ರಮೇಶ್ ಭಟ್, ಯತಿರಾಜ್, ವೀಣಾ ಪೊನ್ನಪ್ಪ, ದೀಪಕ್ ಶೆಟ್ಟಿ ಮುಂತಾದವರ ಅಭಿನಯವಿದೆ.
No Comment! Be the first one.