ತನ್ನ ವೀಕ್ಷಕರಿಗೆ ಸದಾ ವಿಭಿನ್ನ ಶೈಲಿಯ ರಿಯಾಲಿಟಿ ಷೋಗಳನ್ನು ನೀಡುತ್ತಲೇ ಬಂದಿರುವ ಜೀ ಕನ್ನಡ ವಾಹಿನಿ ಈವಾರ ಡ್ರಾಮಾ ಜೂನಿಯರ್ಸ್-೩ ಹಾಗೂ ಸರಿಗಮಪ-೧೫ ಮೂಲಕ ವಿಶೇಷ ಮನರಂಜನೆಯನ್ನು ಡಬಲ್ ಧಮಾಕ ಆಗಿ ನೀಡಲು ಅಣಿಯಾಗಿದೆ.
೭೦ನೇ ಗಣರಾಜ್ಯೋತ್ಸವ ವಿಶೇಷ ದಿನದ ಪ್ರಯುಕ್ತ ಕಿರುತೆರೆಯ ಇತಿಹಾಸದ ಪ್ರಪ್ರಥಮ ಬಾರಿಗೆ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್-೩ ಕಾರ್ಯಕ್ರಮದ ವೇದಿಕೆಯಲ್ಲಿ, ಡ್ರಾಮಾ ಜೂನಿಯರ್ಸ್ನ ಮೂರೂ ಸೀಸನ್ನಿನ ಮಕ್ಕಳು ಹಾಗೂ ಇತರೆ ೧೫೦ಕ್ಕೂ ಹೆಚ್ಚು ಮಕ್ಕಳಿಂದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತಾದ ಭಾರತ ಭಾಗ್ಯವಿದಾತ ಎನ್ನುವ ವಿಶೇಷ ನಾಟಕವನ್ನು ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ, ನಮ್ಮ ದೇಶದ ಗಡಿಪ್ರದೇಶದಲ್ಲಿ ನಿಂತು ಹಗಲು, ರಾತ್ರಿ ಎನ್ನದೆ ತಮ್ಮ ಪ್ರಾಣದ ಹಂಗನ್ನು ತೊರೆದು ದೇಶದ ಹಿತಕ್ಕಾಗಿ ಹೋರಾಡುವ ವೀರ ಯೋಧರ ಕಥೆ ಹೊಂದಿರುವ ಗಡಿ ಭಾವೈಕ್ಯತೆ ಎಂಬ ನಾಟಕ, ಹಾಗೂ ಪದ್ಮವಿಭೂಷಣ ರಾಷ್ಟ್ರಕವಿ ಡಾ.ಕುವೆಂಪು ಅವರು ರಚಿಸಿರುವ eನಪೀಠ ಪ್ರಶಸ್ತಿ ವಿಜೇತ ಕೃತಿ ಶ್ರೀರಾಮಾಯಣ ದರ್ಶನಂನ ಕಿಷ್ಕಿಂದೆ ಸಂಪುಟದಲ್ಲಿ ಬರುವ ವಾಲೀವಧೆ ಎಂಬ ಪೌರಾಣಿಕ ನಾಟಕವನ್ನು ಕೂಡ ಅಭಿನಯಿಸಲಿದ್ದಾರೆ. ಈ ಮೂರು ನಾಟಕಗಳ ಜೊತೆಗೆ ಜೊತೆಗೆ ಮತ್ತೆ ಮೂರುವಿಶೇಷ ಹಾಸ್ಯ ನಾಟಕಗಳನ್ನು ಈ ಮಕ್ಕಳು ಪ್ರದರ್ಶಿಸಲಿದ್ದಾರೆ. ಈ ಎಲ್ಲಾ ವಿಶೇಷ ನಾಟಕಗಳನ್ನು ಜೀ ಕನ್ನಡ ವಾಹಿನಿಯ ವೀಕ್ಷಕರು ಇದೇ ಜ.೨೬ರ ಶನಿವಾರ ರಾತ್ರಿಯ ೮ ಗಂಟೆಯ ಮಹಾಸಂಚಿಕೆಯಲ್ಲಿ ವೀಕ್ಷಿಸ ಬಹುದಾಗಿದೆ.
ಈ ವಾರದ ಸರಿಗಮಪ ಸಂಚಿಕೆಯಲ್ಲಿ ಕಳೆದ ಸೀಸನ್ಗಳ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಈ ಸೀಸನ್ನಿನ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಇದರ ವಿಶೇಷವಾಗಿದೆ. ಸರಿಗಮಪ-೧೦ರ ಅಂಕಿತ ಕುಂಡು, ಅಭಿನವ್, ಸೀಸನ್ ಹನ್ನೊಂದರ ವಿಜೇತ ಚನ್ನಪ್ಪ, ೧೩ನೇ ಸೀಜನ್ ವಿಜೇತ ಸತ್ಯವಾನ್ ಸಾವಿತ್ರಪ್ಪ, ಸುನಿಲ, ಮೈಕ್ ಟೈಸನ್ ಸಂಜಿತ್ ಹೆಗ್ಡೆ, ಮೆಹಬೂಬ್ ಸಾಬ ಜೊತೆಗೆ ೧೫ನೇ ಸೀಜನ್ ವಿಜೇತ ವಿಶ್ವ ಪ್ರಸಾದ್, ಬಳ್ಳಾರಿಯ ಶಿಶು ತಾನ್ಸೇನ್ eನೇಶ ಹಾಗೂ ಇನ್ನೂ ಹಲವಾರು ಸರಿಗಮಪ ಪ್ರತಿಭೆಗಳು ಈ ವಾರ ಒಂದೇ ವೇದಿಕೆಯಲ್ಲಿ ಬಂದು ವೀಕ್ಷಕರನ್ನು ಮನರಂಜಿಸಲಿದ್ದಾರೆ. ಇನ್ನು ಜನಪದ ದನಿಯಿಂದ ಹೆಸರಾದ ಹನುಮಂತ, ಸುನಿಲ್ ಜೊತೆ ಸೇರಿ ಹಾಡಲಿದ್ದಾರೆ. ಈ ವಾರದ ಮಹಾ ಸಂಚಿಕೆಗಳಾದ ಡ್ರಾಮಾ ಜೂನಿಯರ್ಸ್ ೩ ಶನಿವಾರ ರಾತ್ರಿ ೮ಕ್ಕೆ ಹಾಗೂ ಸರಿಗಮಪ ೧೫ ಭಾನುವಾರ ರಾತ್ರಿ ೮ಕ್ಕೆ ಪ್ರಸರವಾಗಲಿವೆ.
#
No Comment! Be the first one.