ದೃಶ್ಯಂ ಸಿನಿಮಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕ್ರೈಂ ಥ್ರಿಲ್ಲರ್ ಜಾನರಿನ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಹಣ ಗಳಿಸಿತ್ತು. ಮಲೆಯಾಳಂ ಭಾಷೆಯಲ್ಲಿ ಮೊದಲಿಗೆ ತೆರೆಕಂಡಿದ್ದ ಈ ಚಿತ್ರವನ್ನು ನಂತರ ತೆಲುಗು, ಹಿಂದಿ, ಕನ್ನಡ, ತಮಿಳು ಭಾಷೆಗಳೂ ಸಹ ರಿಮೇಕ್ ಮಾಡಿದ್ದವು. ದೃಶ್ಯ ಹೆಸರಿನಲ್ಲಿ ಕನ್ನಡದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅತ್ಯದ್ಭುತವಾಗಿ ನಟಿಸಿದ್ದರು. ಅದಾದ ಬಳಿಕ ದೃಶ್ಯಂ 2 ಕೂಡಾ ತೆರೆಕಂಡಿತ್ತು. ಈಗ ಮಲೆಯಾಳಂನಲ್ಲಿ ದೃಶ್ಯಂ 3 ಚಿತ್ರೀಕರಣ ಆರಂಭವಾಗಲಿದೆಯಂತೆ. ಈ ಕುರಿತಾಗಿ ಖುದ್ದು ಚಿತ್ರದ ನಿರ್ಮಾಪಕರೇ ಮಾಹಿತಿ ಹಂಚಿಕೊಂಡಿದ್ದಾರೆ.
ದೃಶ್ಯಂ 3 ಚಿತ್ರಕ್ಕಾಗಿ ಕಾಯ್ದಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ನಿರ್ಮಾಪಕ ಆಂಟೋನಿ ಅವರು ಮಜವಿಲ್ ಎಂಟರ್ ಟೈನ್ ಮೆಂಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಅಭಿಮಾನಿಗಳು ‘ದೃಶ್ಯಂ 3’ ಹ್ಯಾಶ್ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಿದ್ದಾರೆ. ಕ್ಲಾಸಿಕ್ ಕ್ರಿಮಿನಲ್ ಈಸ ಬ್ಯಾಕ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ನಲ್ಲಿ ಜಾರ್ಜ್ ಕುಟ್ಟಿ ಪಾತ್ರಧಾರಿ ಮೋಹನ್ ಲಾಲ್ ಕೈಗಳಿಗೆ ಕೋಳ ತೋಡಿಸಲಾಗಿದೆ. ಜಾರ್ಜ್ ಕುಟ್ಟಿ ಮುಂದೇನು ಮಾಡಬೇಕೆಂಬ ಆಲೋಚನೆಯಲ್ಲಿ ತೊಡಗಿರುವಂತಿದೆ. ಅಂದಹಾಗೆ ಈ ಪೋಸ್ಟರ್ ನಲ್ಲಿ ‘ದೃಶ್ಯಂ’-3 ದಿ ಕನ್ಕ್ಲೂಷನ್ ಎಂದು ಬರೆಯಲಾಗಿದೆ. ಇದನ್ನೆಲ್ಲಾ ಗಮನಿಸಿದರೆ ದೃಶ್ಯಂ ಕಥೆ ಅಂತ್ಯವಾಗುವಂತಿದೆ. ಒಟ್ಟಾರೆ ಎಷ್ಟೇ ಬುದ್ಧಿವಂತಿಕೆಯಿದ್ದರೂ ಕಾನೂನಿನ ಮುಂದೆ ಗೆಲ್ಲಲಾಗದು ಎಂಬ ಮೆಸೇಜ್ ಚಿತ್ರದಿಂದ ಸಿಗುವಂತಿದೆ.
No Comment! Be the first one.