- ಮಹಂತೇಶ್ ಮಂಡಗದ್ದೆ
ಪೊಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಪೊಗದಸ್ತಾಗಿ ಅಬ್ಬರಿಸಿದ್ದವರು ದ್ರುವ ಸರ್ಜಾ. ಪೊಗರು ಥೇಟರಿಗೆ ಬರುವ ಮುಂಚೆಯೇ ಆ್ಯಕ್ಷನ್ ಪ್ರಿನ್ಸ್ ತಮ್ಮ ಮುಂದಿನ ಸಿನಿಮಾವನ್ನ ಅನೌನ್ಸ್ ಮಾಡಿದ್ರು. ದುಬಾರಿ ಅನ್ನೋ ಪವರ್ ಫುಲ್ ಟೈಟಲ್ ರಿಲೀಸ್ ಮಾಡೋದರ ಜೊತೆಗೆ ಮುಹೂರ್ತವನ್ನೂ ಚಿತ್ರತಂಡ ಮುಗಿಸಿತ್ತು. ಪೊಗರು ಸಿನಿಮಾದ ಡೈರೆಕ್ಟರ್ ನಂದ ಕಿಶೋರ್ ಈ ಸಿನಿಮಾದ ಸಾರಥ್ಯ ವಹಿಸಿಕೊಳ್ತಾರೆ ಅನ್ನೋದು ಪಕ್ಕಾ ಆಗಿತ್ತು. ಆದರೆ, ಸದ್ಯ ಕಾರಣಾಂತರಗಳಿಂದ ದುಬಾರಿ ಸಿನಿಮಾದಿಂದ ನಂದ ಕಿಶೋರ್ ಹೊರಬಂದಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ ದುಬಾರಿ ಸಿನಿಮಾದ ಕೆಲಸಗಳಿಗೆ ಬ್ರೇಕ್ ಬಿದ್ದಿದೆ ಅಂತಾ ಗಾಂಧಿ ನಗರದಲ್ಲಿ ಗಾಸಿಪ್ ಹರಿದಾಡ್ತಿದೆ.
ಯಾರಾಗ್ತಾರೆ ದುಬಾರಿ ಸಾರಥಿ?
ಹೌದು, ದುಬಾರಿ ಸಿನಿಮಾ ಟೀಮಿನಿಂದ ನಂದ ಕಿಶೋರ್ ಏನೋ ಹೊರ ಬಂದಿದ್ದಾರೆ. ಆದರೆ ದ್ರುವ ಸರ್ಜಾ ಈ ಸಿನಿಮಾವನ್ನ ಮಾಡಲಿದ್ದಾರಂತೆ. ದುಬಾರಿ ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಹೀರೋ ಆಗಿಯೇ ಇರೋದು ಪಕ್ಕಾ ಆಗಿದ್ದು, ನಿರ್ದೇಶಕ ಮಾತ್ರ ಚೇಂಜ್ ಆಗ್ತಾರೆ ಅನ್ನೋದು ಚಿತ್ರತಂಡದ ಮೂಲಗಳಿಂದ ಬಂದಿರೋ ಮಾಹಿತಿ. ಹಾಗಾದ್ರೆ ದುಬಾರಿ ಸಿನಿಮಾದ ಸಾರಥಿ ಯಾರಾಗ್ತಾರೆ..? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಒಂದು ಮೂಲಗಳ ಪ್ರಕಾರ ಜಗ್ಗುದಾದ ಸಿನಿಮಾವನ್ನ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿದ್ದ ರಾಘವೇಂದ್ರ ಹೆಗ್ಡೆ ಈ ದುಬಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಪಕ್ಕಾ ಮಾಹಿತಿ ಹೊರ ಬಿದ್ದಿಲ್ಲ.
ಬಹದ್ದೂರ್ ಮುಂದಿನ ಸಿನಿಮಾದ ಬಗ್ಗೆ ಹಲವು ಗೊಂದಲ!
ದುಬಾರಿ ಸಿನಿಮಾದ ಬಗ್ಗೆ ಈ ರೀತಿ ಗಾಸಿಪ್ ಗಳು ಹರಿದಾಡ್ತಿರೋ ಬೆನ್ನಲ್ಲೇ ದ್ರುವ ಸರ್ಜಾ ಮುಂದಿನ ಸಿನಿಮಾ ಬೇರೆ ಆಗಲಿದೆ ಎನ್ನುವ ವಿಚಾರಗಳು ಹೊರಬರುತ್ತಿವೆ. ದುಬಾರಿ ಸದ್ಯಕ್ಕೆ ಸೈಡಿಗೆ ಇಟ್ಟು ಪುರಿ ಜಗನ್ನಾಥ್ ಜೊತೆ ದ್ರುವ ಸಿನಿಮಾ ಮಾಡಲಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದ ತುಂಬಾ ಹಬ್ಬುತ್ತಿವೆ. ಹೀಗಾಗಿ ದ್ರುವ ಸರ್ಜಾರ ಮುಂದಿನ ಸಿನಿಮಾ ಯಾವುದಾಗಬಹುದು ಅನ್ನೋ ಗೊಂದಲ ಎಲ್ಲರಲ್ಲೂ ಶುರುವಾಗಿದೆ. ಈ ಪ್ರಶ್ನೆಗೆ ಪಕ್ಕಾ ಉತ್ತರ ಇಷ್ಟರಲ್ಲೇ ಸಿಗಲಿದೆ. ಶೀಘ್ರದಲ್ಲೇ ದ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.
No Comment! Be the first one.