ದುನಿಯಾ ವಿಜಯ್ ಖಾಸಗಿ ಬದುಕಿನ ಕಿತ್ತಾಟಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಪಾನಿಪುರಿ ಕಿಟ್ಟಿ ಪ್ರಕರಣದಿಂದ ಆರಂಭವಾದ ವಿವಾದ ಇದೀಗ ಪತ್ನಿಯರ ಮಾರಾಮಾರಿಯ ಮೂಲಕ ವಿಜಿಯನ್ನು ಆವರಿಸಿಕೊಂಡಿದೆ. ವಿಜಿ ಇಂಥಾ ಜಂಜಾಟದಲ್ಲಿ ಕಳೆದು ಹೋಗಿರೋವಾಗಲೇ ಅವರು ನಟಿಸುತ್ತಿದ್ದ ಬಹು ನಿರೀಕ್ಷಿತ ಕುಸ್ತಿ ಚಿತ್ರದ ಕಥೆ ಮಗೀತು ಎಂಬಂಥಾ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಇದೀಗ ಈ ಬಗ್ಗೆ ಖುದ್ದು ಕುಸ್ತಿ ಚಿತ್ರದ ನಿರ್ದೇಶಕ ರಾಘು ಶಿವಮೊಗ್ಗ ಸ್ಪಷ್ಟೀಕರಣ ನೀಡಿದ್ದಾರೆ.
ರಾಘು ಹೇಳಿರೋ ಪ್ರಕಾರವಾಗಿ ಹೇಳೋದಾದರೆ, ದುನಿಯಾ ವಿಜಿ ನಟಿಸುತ್ತಿದ್ದ ಕುಸ್ತಿ ಚಿತ್ರ ನಿಂತಿಲ್ಲ ಆದರೆ ಸದ್ಯಕ್ಕೆ ಮುಂದಕ್ಕೆ ಹೋಗಿದೆಯಷ್ಟೇ. ಬಹುಶಃ ಮಾಮೂಲಿ ಚಿತ್ರವಾಗಿದ್ದರೆ ಈ ಹೊತ್ತಿಗೆಲ್ಲಾ ದುನಿಯಾ ವಿಜಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರೇನೋ. ಆದರೆ ಅವರು ಈ ಚಿತ್ರಕ್ಕಾಗಿ ನಡೆಸಿದ್ದ ಬಾಡಿ ಬಲ್ಡ್, ಕುಸ್ತಿ ತರಬೇತಿಗಳೆಲ್ಲ ವೈಯಕ್ತಿಕ ವಿವಾದಗಳಿಂದ ನಿಂತು ಹೋಗಿವೆ. ಇನ್ನು ಹೊಸದಾಗಿಯೇ ಆರಂಭ ಮಾಡಬೇಕಷ್ಟೇ. ಇನ್ನು ವಿಜಿ ಮಗ ಸಾಮ್ರಾಟ್ ಕೂಡಾ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲು ರೆಡಿಯಾಗುತ್ತಿದ್ದ. ಆತನಿಗೂ ತರಬೇತಿ ಕೊಡಿಸಲಾಗುತ್ತಿತ್ತು. ಅದೂ ಕೂಡಾ ಬ್ರೇಕಾಗಿದೆ.
ಈಗ ಅಪ್ಪ ಮಗನಿಗೆ ಈ ತರಬೇತಿಗಳನ್ನು ಹೊಸತಾಗಿ ಕೊಡಿಸಿ ರೆಡಿಯಾಗಿಸಬೇಕಿದೆ. ಸಾಮ್ರಾಟ್ಗೆ ಇನ್ನೇನು ಶಾಲಾ ಪರೀಕ್ಷೆಗಳು ಶುರುವಾಗೋದರಿಂದ ಅದೂ ಕಾಡಾ ಕಷ್ಟ ಸಾಧ್ಯ. ಆದ್ದರಿಂದಲೇ ದುನಿಯಾ ವಿಜಿ ಮತ್ತು ರಾಘು ಸೇರಿ ಚರ್ಚೆ ನಡೆಸಿ ಕುಸ್ತಿ ಚಿತ್ರವನ್ನು ಮುಂದಿನ ವರ್ಷದಿಂದ ಆರಂಭಿಸಲು ನಿರ್ಧಾರ ಮಾಡಿದ್ದಾರಂತೆ. ಕುಸ್ತಿ ಚಿತ್ರದ ಹಿಂದಿರೋ ನಿಜವಾದ ವಿಚಾರ ಇಷ್ಟು. ಆದರೆ ಈ ಚಿತ್ರ ನಿಂತೇ ಹೋಗಿದೆ ಎಂಬಂಥಾ ಯಾವ ರೂಮರುಗಳನ್ನೂ ನಂಬ ಬೇಡಿ ಅಂತ ರಾಘು ಶಿವಮೊಗ್ಗ ಮನವಿ ಮಾಡಿದ್ದಾರೆ.
ಇದೇ ಹೊತ್ತಿನಲ್ಲಿ ಮತ್ತೊಂದು ಹೊಸಾ ಸುದ್ದಿಯನ್ನೂ ಕೂಡಾ ರಾಘು ಜಾಹೀರು ಮಾಡಿದ್ದಾರೆ. ಕುಸ್ತಿ ಚಿತ್ರಕ್ಕೆ ತಯಾರಿ ನಡೆಸುತ್ತಲೇ ಮತ್ತೊಂದು ಚಿತ್ರವ್ನ್ನು ಮಾಡಿ ಮುಗಿಸಲೂ ತಯಾ ರಿಗಳು ನಡೆಯಲಿವೆ. ಈ ಹೊಸಾ ಚಿತ್ರ ಕೂಡಾ ವಿಜಿಯ ಹೋಂ ಬ್ಯಾನರ್ ದುನಿಯಾ ಟಾಕೀಸ್ ಕಡೆಯಿಂದಲೇ ನಿರ್ಮಾಣಗೊಳ್ಳಲಿದೆ. ಈ ಚಿತ್ರದಲ್ಲಿ ವಿಶೇಷವಾದ ಪಾತ್ರದಲ್ಲಿ ದುನಿಯಾ ವಿಜಿ ಅವರೇ ನಾಯಕನಾಗಿ ನಟಿಸಲಿದ್ದಾರಂತೆ. ಈಗಾಗಲೇ ಈ ಚಿತ್ರದ ಸ್ಕ್ರಿಫ್ಟ್ ಬರೆಯೋ ಕೆಲಸದಲ್ಲಿ ರಾಘು ತೊಡಗಿಸಿಕೊಂಡಿದ್ದಾರಂತೆ. ಈ ಚಿತ್ರ ಮೊದಲು ತೆರೆ ಕಾಣಲಿದೆ. ಇದರ ಜೊತೆಗೇ ವಿಜಿ ಮತ್ತು ಸಾಮ್ರಾಟ್ ಕುಸ್ತಿಗಾಗಿ ತಯಾರಿ ನಡೆಸಲಿದ್ದಾರೆ.
#
No Comment! Be the first one.