ಪೂರ್ಣ ಪ್ರಮಾಣದ ಪೋಲಿ ಜೋಕುಗಳ ಗುಚ್ಚ ಎದು ಚಪಲಾ ಕಥಾ. ಇದು ಟೆಮ್ಟ್ ರವಿ ಎಂಬ ವ್ಯಕ್ತಿಯ ಕುರಿತಾಗಿ ವಿವರಿಸುತ್ತದೆ. ಆತ ತನ್ನನ್ನು ಲೈಂಗಿಕ ವಿಚಾರದಲ್ಲಿ ನಿಯಂತ್ರಿಸಿಕೊಳ್ಳಲಾಗದ ವ್ಯಕ್ತಿ. ಅದರ ಸಲುವಾಗಿ ಹೇಗೆ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ಒಳಗಾಗುತ್ತಾನೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಈ ಚಿತ್ರವನ್ನು ಸ್ಯಾಮ್ ಜೆ ಚೈತನ್ಯ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್ ಪಚಿಪಾಲ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.ನಿನ್ನೆ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ಗೆ ದಾಳಿ ಇಟ್ಟಿದೆ.
https://www.youtube.com/watch?v=sjeEzf94o7g
ಪುರುಷನಿಂದ ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯು ಒಳಗಾದಾಗ ಸಮಾಜವು ಆಕೆಯನ್ನು ಅಪರಾಧಿ ಸ್ಥಾನದಲ್ಲಿಯೇ ನೋಡುತ್ತದೆ. ಯಾರೂ ಸಹ ಆಕೆಯ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಉದಾರತೆಯನ್ನು ತೋರುವುದೇ ಇಲ್ಲ. ಮತ್ತೊಂದು ಮಗ್ಗುಲಲ್ಲಿ ಮಹಿಳೆಯ ಮೇಲೆ ಪುರುಷನು ದೂರು ನೀಡಿದರೂ ಸಹ ಯಾರೂ ನಂಬಲಿಕ್ಕೆ ಸಿದ್ದನಿರುವುದಿಲ್ಲ ಎಂಬ ಸೂಕ್ಷ್ಮ ವಿಚಾರಗಳನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆ. ಪ್ರಸ್ತುತ ವಿದ್ಯಮಾನಕ್ಕೆ ಇಂತಹ ವಿಚಾರಗಳು ಹೆಚ್ಚು ಸ್ವಾಗತಾರ್ಹವಾದದ್ದು ಕೂಡ.
ಈ ಚಿತ್ರಕ್ಕೆ ಎಂ.ಟಿ. ಕವಿ ಶಂಕರ್ ಸಂಗೀತ ಸಂಯೋಜನೆ ಮಾಡಿದ್ದು, ಆಯಿಷಾ ಸಿಂಗ್ ಮತ್ತು ಬಾನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ.ವಿ.ಎನ್. ಶೇಖರ್ ರೆಡ್ಡಿಯವರ ಚರಿತಾ ಸಿನಿಮಾ ಆರ್ಟ್ಸ್ ಬ್ಯಾನರ್ ನಲ್ಲಿ ಈ ಸಿನಿಮಾವು ಮೂಡಿ ಬರುತ್ತಿದೆ.
Leave a Reply
You must be logged in to post a comment.