ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಹೇಳೋ ಭಗವಂತಾ… ಬಾರಲ್ಲಿ ಹೆಣ್ಣೈಕ್ಳು ಕುಡಿಯೋದು ತಪ್ಪಂತಾ ಯಾರಾದ್ರೂ ಬೋರ್ಡ್ ಹಾಕವ್ರಾ? ನಮಗೂನು ಲವ್ವಲ್ಲಿ ಬ್ರೇಕಪ್ಪು ಆಗೈತೆ ಒಂದೆರಡು ಪೆಗ್ ಹಾಕ್ತೀರಾ? ಶಿವನೇ ಒಂದೆರಡು ಪೆಗ್ ಹಾಕ್ತೀರಾ? ಫೇಸ್ ಬುಕ್ಕಲ್ ರಿಕ್ವೆಸ್ಟು ಕಳಿಸ್ತೀರಾ? ವಾಟ್ಸಾಪು ನಂಬರ್ ಕೇಳ್ತೀರ…
ಸ್ಟೇಟಸಲ್ ಸಿಂಗಲ್ ಅಂತಾ ಹಾಕ್ತೀರಾ- ನೀವೇನೇ ಸಿಗ್ನಲ್ಲು ಕೊಡ್ತೀರಾ… ಮೀಟಿಂಗು ಮಾಡಲ್ವಾ ಅಂತೀರಾ – ಮಾಡಿದ್ರೆ ಐ ಲವ್ ಯು ಹೇಳ್ತೀರಾ… ಹೀಗೆ ಶುರುವಾಗುವ ಹಾಡು ಬೆಳಿಗ್ಗೆ ಮೀಟಾಗಿ ಸಂಜೆಗೆ ಎಂಡಾಯ್ತಲ್ಲಾ? ಲವ್ವು ಸೆಕ್ಸಲ್ಲೇ ಮುಗಿದೋಯ್ತಲ್ಲಾ? ಅನ್ನುವ ತನಕ ಮುಂದುವರೆಯುತ್ತದೆ.
– ಇದು ಶೋಮ್ಯಾನ್ ಅಂತಲೇ ಫೇಮಸ್ಸಾಗಿರುವ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಹಾಡು. ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ ಮತ್ತು ಕೈಲಾಶ್ ಖೇರ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡು ಈಗಷ್ಟೇ ಲೋಕಾರ್ಪಣೆಗೊಂಡಿದೆ. ಸದ್ಯ ರಕ್ಷಿತಾ ಪ್ರೇಮ್ ಸಹೋದರ ರಾಣಾರನ್ನು ಲಾಂಚ್ ಮಾಡಲು ಪ್ರೇಮ್ ಶ್ರಮಿಸುತ್ತಿದ್ದಾರೆ. ʻಏಕ್ ಲವ್ ಯಾʼ ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಈ ಚಿತ್ರದ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಲವ್ ಕಂ ಆ್ಯಕ್ಷನ್ ಸಬ್ಜೆಕ್ಟ್ ಈ ಚಿತ್ರದ್ದಾಗಿದ್ದು ಅಪಾರ ವೆಚ್ಚದ ಸೆಟ್ ಗಳನ್ನು ನಿರ್ಮಿಸಿ ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡು ಕೂಡಾ ಒಂದೇ ಏಟಿಗೆ ಎಲ್ಲರನ್ನೂ ಸೆಳೆಯುತ್ತಿದೆ.
ಪ್ರೇಮ್ ಅವರ ಸಿನಿಮಾಗಳಲ್ಲಿ ಹಾಡುಗಳು ಪ್ರಾಮುಖ್ಯತೆ ಪಡೆದಿರುತ್ತವೆ. ಇವರು ಆಯ್ಕೆ ಮಾಡಿಕೊಳ್ಳುವ ಟ್ಯೂನಿನಲ್ಲೇ ಜನರನ್ನು ಸಮ್ಮೋಹಕಗೊಳಿಸುವ ಗುಣವಿರುತ್ತದೆ. ಜೊತೆಗೆ ಮನಸಿಗೆ ಹತ್ತಿರವಾದ ಸಾಲುಗಳು ಯಾವಾಗಲೂ ಗೆಲುವು ಸಾಧಿಸುತ್ತದೆ. ಸದ್ಯ ಏಕ್ ಲವ್ ಯಾದ ಹಾಡು ಕೂಡಾ ಇದೇ ನಿಟ್ಟಿನಲ್ಲಿದೆ.
Comments