ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿರುವ ರಕ್ಷಿತಾ ಸಹೋದರ ಅಭಿಷೇಕ್ ನಟಿಸುತ್ತಿರುವ ಏಕ್ ಲವ್ ಸಿನಿಮಾದ ಶೂಟಿಂಗ್ ಈಗಷ್ಟೇ ಆರಂಭವಾಗಿದೆ. ರಾಣಾ ಆಗಿ ಪರಿಚಯವಾಗುತ್ತಿರುವ ಅಭಿಷೇಕ್ ಗೆ ಫೈಟಿಂಗ್ ಹೇಳಿ ಕೊಡುವುದಕ್ಕೆ ಸೌತ್ ಇಂಡಿಯಾದ ಬಹು ಬೇಡಿಕೆಯ ಸ್ಟಂಟ್ ಮಾಸ್ಟರ್ ಸ್ಟಂಟ್ ಸಿಲ್ವಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸೆಟ್ ನಲ್ಲಿ ಪ್ರೇಮ್ ಪುತ್ರ ಸೂರ್ಯನಿಗೆ ಗಾಜಿನ ಬಾಟಲ್ ಹಿಡಿದು ಸ್ಟಂಟ್ ಮಾಡುವುದನ್ನು ಹೇಳಿಕೊಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಹಾಗಂತ ಸಿಲ್ವಾ ಸ್ಯಾಂಡಲ್ ವುಡ್ ಗೆ ಇದೇ ಮೊದಲೇನು ಕಾಲಿಟ್ಟಿಲ್ಲ. ಈ ಮೊದಲು ಪವರ್ ಸ್ಟಾರ್ ಅಭಿನಯದ ಚಕ್ರವ್ಯೂಹ ಸಿನಿಮಾ ಸಾಹಸ ಸಂಯೋಜನೆಯನ್ನು ಅವರೇ ಮಾಡಿರೋದನ್ನು ಯಾರೂ ಮರೆಯುವಂತಿಲ್ಲ. ಇನ್ನು ದಿ ವಿಲನ್ ಸಿನಿಮಾ ಯಶಸ್ಸಿನ ನಂತರ ಪ್ರೇಮ್ ತನ್ನ ಬಾಮೈದನಿಗಾಗಿ ಏಕ್ ಲವ್ ಯಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಅವರದೇ ಆದ ಗಿಮಿಕ್ಕುಗಳು, ಪ್ರಚಾರದ ತಂತ್ರಗಳನ್ನು ಮಾಡುವುದಕ್ಕೆ ಈಗಾಗಲೇ ರೆಡಿಯಾಗಿದ್ದಾರೆ. ಏಕ್ ಲವ್ ಯಾ ಸಿನಿಮಾ ಚಿತ್ರೀಕರಣ 26 ದಿನಗಳ ಕಾಲ ನಡೆಯಲಿದ್ದು, ಸಿನಿಮಾಕ್ಕೆ ತಕ್ಕಂತಹ ಸಿದ್ದತೆಯನ್ನು ಬಾವನ ನಿರ್ದೇಶನದಂತೆ ಅಭಿಷೇಕ್ ಪಡೆದಿರೋದು ವಿಶೇಷ.
Comments