ದಿ ವಿಲನ್ ಸಕ್ಸಸ್ ನ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ಏಕ್ ಲವ್ ಯಾ. ಈ ಸಿನಿಮಾದ ಮೂಲಕ ರಕ್ಷಿತಾ ಸಹೋದರ ಅಭಿಷೇಕ್ ರಾವ್(ರಾಣಾ) ಅವರನ್ನು ಸ್ಯಾಂಡಲ್ ವುಡ್ ಗೆ ಲಾಂಚ್ ಮಾಡಲಾಗುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಟೈಟಲ್ ಹಾಗೂ ಮೋಷನ್ ಟೀಸರ್ನಿಂದ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರದ ಶೂಟಿಂಗ್ ಇದೇ ತಿಂಗಳ ಅಂತ್ಯದಿಂದ ಶುರುವಾಗಲಿದೆ.
ವಿಶೇಷ ಅಂದ್ರೆ ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಭರ್ಜರಿ ಆ್ಯಕ್ಷನ್ನಿಂದ ಕೂಡಿರಲಿದ್ದು, ಕಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಸಿಲ್ವಾ ರಾಣಾಗೆ ಫೈಟಿಂಗ್ ಹೇಳಿಕೊಡುತ್ತಿದ್ದಾರೆ. ತಮಿಳಿನ ರೋಬೋಟ್ ಹಾಗೂ ಕತ್ತಿ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರೋ ಸ್ಟಂಟ್ ಮಾಸ್ಟರ್ ಅನ್ನು ಪ್ರೇಮ್ ಕನ್ನಡಕ್ಕೆ ಕರೆ ತರುತ್ತಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಾಲಿವುಡ್ನಿಂದ ದೊಡ್ಡ ನಟರೊಬ್ಬರನ್ನು ಕರೆತರಲಿದ್ದಾರೆ ಎನ್ನಲಾಗಿದೆ. ರಾಣನಿಗೆ ಜೋಡಿಯಾಗಿ ಯಾವ ನಟಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯನ್ನು ಪ್ರೇಮ್ ಇನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ಹೀರೋಯಿನ್ ಇಲ್ಲದೆಯೇ ಚಿತ್ರೀಕರಣ ಮಾಡಲು ರೆಡಿಯಾಗಿದ್ದಾರೆ.
No Comment! Be the first one.