ಳೆಯ ಎನಲೆ, ಇನಿಯಾ ಎನಲೆ, ಏನೇ ಅನಲಿ, ಅದಕೂ ಮಿಗಿಲೆ…. ʻಗಗನವೇ ಬಾಗಿ ಭುವಿಯನು ಕೇಳಿದ ಹಾಗೆʼ ಥರದ ಅತಿ ಚೆಂದದ ಹಾಡನ್ನು ಬರೆದವರು ಕವಿರಾಜ್‌. ಕವಿ ಬರೆದ ಹಾಡೆಲ್ಲವನ್ನೂ ಜೀವಿಸಿದಂತೆ ಬಾಳುತ್ತಿರುವ ಆನೆ ಕುಶ.

ವಿಜಯಕರ್ನಾಕಟ ಪತ್ರಿಕೆಯ ಮೈಸೂರು ಮುಖ್ಯ ವರದಿಗಾರ ಐತಿಚಂಡ ರಮೇಶ್‌ ಉತ್ತಪ್ಪ. ಪತ್ರಕರ್ತರಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಉತ್ತಪ್ಪನವರು ಸಾಹಿತ್ಯ, ರಂಗಭೂಮಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವವರು. ಕೊಡಗನ್ನು ನಿರಂತರ ಅಧ್ಯಯನಕ್ಕೆ ಒಳಪಡಿಸಿ, ಸಾಕಷ್ಟು ಕೃತಿಗಳನ್ನು ಕೊಟ್ಟವರು ಇವರು. ಸದ್ಯ ಉತ್ತಪ್ಪನವರು ಬರೆದಿರುವ ಆನೆಗಳ ಕುರಿತಾದ ನಾಲ್ಕು ಪುಸ್ತಕಗಳು ಮುದ್ರಣಗೊಳ್ಳುತ್ತಿವೆ. ಗಜ ಜಗತ್ತಿನ ರೋಚಕ ಮತ್ತು ಸೂಕ್ಷ್ಮ ವಿವರಗಳನ್ನು ತೆರೆದಿಡುವ  ʻಆನೆ ಲೋಕದ ವಿಸ್ಮಯʼ, ದಸರಾ ಅಂಬಾರಿ ಹೊರುವ ಅಭಿಮನ್ಯುವನ್ನು ಕುರಿತಾದ ʻಅಭಿಮನ್ಯು ದಿ ಗ್ರೇಟ್ʼ‌ ಮತ್ತು ಕೊಡಗಿನಲ್ಲಿ ನೈಜವಾಗಿ ನಡೆದ ಪ್ರಕರಣವನ್ನು ಆಧರಿಸಿದ  ಅನೆಯೊಂದರ ಲವ್‌ ಸ್ಟೋರಿ ʻಕುಶಾ ಕೀ ಕಹಾನಿʼ ಮತ್ತು ಆನೆ ಲೋಕದ ವಿಸ್ಮಯ ಕೃತಿಯ ಇಂಗ್ಲಿಷ್‌ ಆವೃತ್ತಿ ʻದಿ ಟಾಕಿಂಗ್‌ ಎಲಿಫೆಂಟ್ʼ.‌ ಈ ಎಲ್ಲ ಪುಸ್ತಕಗಳು ಅಕ್ಟೋಬರ್‌ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳುತ್ತಿವೆ.

ಇದರಲ್ಲಿ ಕುಶಾ ಕೀ ಕಹಾನಿ ಕೃತಿಗೆ ಕನ್ನಡದ ಖ್ಯಾತ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್‌ ಮುನ್ನುಡಿ ಬರೆದಿದ್ದಾರೆ. ಎಲ್ಲೆ ಹೋಗಲಿ ನಿಂದೆ ಹಾವಳಿ, ನನ್ನ ಜೀವನ ನಿನ್ನ ಕೈಲಿ, ನಿಂತಲ್ಲಿ ನಿಲ್ಲಲಾರೆ… ಒಂದು ಮನವಿ, ನಿನಗೊಂದು ಮನವಿ ಪ್ರತಿ ಜನುಮ ಹೀಗೆ, ಜೊತೆ ಇರು ನೀ ನಂಗೆ…, ಒಂದೊಂದೇ ಒಂದೊಂದೇ ಹೊಂಗನಸು ಕಣ್ಮುಂದೆ… ಗೆಳೆಯ ಎನಲೆ, ಇನಿಯಾ ಎನಲೆ, ಏನೇ ಅನಲಿ, ಅದಕೂ ಮಿಗಿಲೆ…. ʻಗಗನವೇ ಬಾಗಿ ಭುವಿಯನು ಕೇಳಿದ ಹಾಗೆʼ ಥರದ ಅತಿ ಚೆಂದದ ಹಾಡನ್ನು ಬರೆದವರು ಕವಿರಾಜ್‌. ಕವಿ ಬರೆದ ಹಾಡೆಲ್ಲವನ್ನೂ ಜೀವಿಸಿದಂತೆ ಬಾಳುತ್ತಿರುವ ಆನೆ ಕುಶ.

ಕುಶನ ಲವ್‌ ಕಹಾನಿ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ. ಪ್ರೀತಿಸಿದವಳಿಗಾಗಿ ಜೊತೆಗಿದ್ದವರನ್ನು, ತನ್ನ ಸ್ವಾಭಾವಿಕ ಪ್ರದೇಶವನ್ನು ಬಿಟ್ಟು ಕಾಲ್ಕಿತ್ತ ಕುಶಾ ಲೈಫಲ್ಲಿ ಏನೇನಾಯಿತು? ಊರು ಬಿಟ್ಟು ಓಡಿದವನ ಬದುಕಲ್ಲಿ ಎಂಟ್ರಿ ಕೊಟ್ಟ ವಿಲನ್‌ ಯಾರು? ಎರಡು ಜೀವಗಳ ಪ್ರೀತಿಯ ಸಂಕೇತವಾಗಿ ಕುಡಿಯೊಂದು ಜನಿಸಿತಾ? ಅಸಲಿಗೆ ಕುಶನ ಲವ್‌ ಸ್ಟೋರಿ ಗೆಲುವು ಕಂಡಿತಾ? ಅಥವಾ ದುರಂತ ಘಟಿಸಿತಾ? ಎಂಬಿತ್ಯಾದಿ ವಿವರಗಳು ʻಕುಶಾ ಕೀ ಕಹಾನಿʼಯಲ್ಲಿ ಕಣ್ಣಿಗೆ ಕಟ್ಟಿದಂತೆ ಬಿಚ್ಚಿಕೊಂಡಿದೆ. ಎರಡು ಆನೆಗಳ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ವಿರಹದ ನೋವನ್ನೂ ಮನಸ್ಸಿಗೆ ನಾಟುವಂತೆ ನಿರೂಪಿಸಲಾಗಿದೆ.  ಕಮರ್ಷಿಯಲ್‌ ಸಿನಿಮಾದ ರೀತಿ ಟ್ವಿಸ್ಟುಗಳ ಮೇಲೊಂದು ಟ್ವಿಸ್ಟು ಹೊಂದಿರುವ ʻಕುಶಾ ಕೀ ಕಹಾನಿʼ ಪುಸ್ತಕ ಜಗತ್ತಿನಲ್ಲಿ ಹೊಸ ದಾಖಲೆ ಬರೆಯೋದು ಗ್ಯಾರಂಟಿ. ಯಾವುದೇ ವಯಸ್ಸಿನ ಓದುಗರು ಸಲೀಸಾಗಿ ಓದಬಲ್ಲ ಸರಳ ನಿರೂಪಣೆ ರಮೇಶ್‌ ಉತ್ತಪ್ಪನವರದ್ದು. ಇಂಥದ್ದೊಂದು ಚೆಂದನೆಯ ಕೃತಿಗೆ ಕವಿರಾಜ್‌ ಮುನ್ನುಡಿ ಬರೆದಿರುವುದು ನಿಜಕ್ಕೂ ಖುಷಿಯ ವಿಚಾರ.

ಅಕ್ಷರ ಮಂಟಪ ಪ್ರಕಾಶನದ ಚೇತನ್‌ ಕಣಬೂರು ಈ ಕೃತಿಯನ್ನು ಪ್ರಕಟಿಸುತ್ತಿದ್ದಾರೆ. ಬರಿಯ ಮಾಹಿತಿ ನೀಡದೆ, ಕುಷನ ವಿವಿಧ ಫೋಟೋಗಳನ್ನೆಲ್ಲಾ ಒಟ್ಟುಕೂಡಿಸಿ, ಚೆಂದದ ಪುಸ್ತಕವನ್ನು ರೂಪಿಸಿದ್ದಾರೆ. ಪುಸ್ತಕ ಪ್ರಿಯರು ಕುಶನ ಕಹಾನಿಯನ್ನು ಓದಿ ನಿಜಕ್ಕೂ ಎಂಜಾಯ್‌ ಮಾಡಬಹುದು!

ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ : 

Chetan Kanabur
Akshara Mantapa
# 1667, 6th Cross, 6th `C’ Main, Hampinagara,
Bengaluru-560104
Mob: 99861 67684

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಿಲೀಸಿಗೂ ಮುಂಚೆ ಸೇಲಾಯ್ತು ಕನ್ನಡತಿಯ ಕತೆ ಡಬ್ಬಿ!

Previous article

ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ!

Next article

You may also like

Comments

Leave a reply

Your email address will not be published.