ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ತೆರೆಗೆ ಬರುತ್ತಿದೆ. ಈ ಹೊತ್ತಿನಲ್ಲಿ ಸೃಜನ್ ಈ ಚಿತ್ರವನ್ನು ಯಾಕೆ ನೋಡಬೇಕು? ಈ ಚಿತ್ರದ ವಿಶೇಷತೆಗಳೇನು ಅನ್ನೋದರ ಬಗ್ಗೆ ಒಂದೊಂದಾಗಿ ಇಲ್ಲಿ ವಿವರಿಸಲಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ…

ಸಾಮಾನ್ಯವಾಗಿ ಸಿನಿಮಾವೊಂದಕ್ಕೆ ಹೋಗುವವರ ತಲೆಯಲ್ಲಿ ಈ ಸಿನಿಮಾಗೆ ನಾನು ಮನೆಯಲ್ಲಿ ಹೇಳಿ ಹೋಗಬೇಕಾ ಬೇಡ್ವಾ? ಅಪ್ಪ ಅಮ್ಮಂದಿರನ್ನೂ ಕರೆದುಕೊಂಡು ಹೋಗಬೇಕಾ? ಗರ್ಲ್ ಫ್ರೆಂಡ್ ಜೊತೆ ಮಾತ್ರ ಹೋಗಬೇಕಾ? ಆಫೀಸು ಮುಗಿಸಿಕೊಂಡು ಸಹಪಾಠಿಗಳೊಂದಿಗೆ ಹೋಗೋದಾ? ಸ್ನೇಹಿತರೊಂದಿಗೆ ಮಾತ್ರ ಹೋದರೆ ಉತ್ತಮವಾ? ಈ ಥರ ಪ್ರಶ್ನೆಗಳು ಉದ್ಭವಿಸುತ್ತದೆ. ಸಾಮಾಜಿಕ ಕಳಕಳಿ ಇರುವ ಸಿನಿಮಾಗಳೆಂದರೆ ಅದನ್ನು ಇಷ್ಟ ಪಡುವ ವರ್ಗ ಇರುತ್ತೆ. ಮಾಸ್ ಸಿನಿಮಾ ಅಂದರೆ, ಕಾಲೇಜು ವಿದ್ಯರ್ಥಿಗಳು, ಪಡ್ಡೆ ಹುಡುಗರು ಹೆಚ್ಚು ಇಷ್ಟ ಪಡುತ್ತಾರೆ. ಕೆಲವೊಂದು ಎಲಿಮೆಂಟುಗಳು ಯುವಕರಿಗೆ ಇಷ್ಟವಾಗದಿದ್ದರೂ ಫ್ಯಾಮಿಲಿ ಆಡಿಯನ್ಸ್ಗೆ ಮೆಚ್ಚುಗೆಯಾಗುತ್ತದೆ.
ಹೀಗೆ ಎಲ್ಲ ಥರದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಸಿನಿಮಾ ಎಲ್ಲಿದ್ದೆ ಇಲ್ಲಿತನಕ. ಫ್ಯಾಮಿಲಿ ಸೆಂಟಿಮೆಂಟು, ಫ್ರೆಂಡ್ಶಿಪ್ಪು, ಹಾಡುಗಳು, ಫೈಟು, ಮಸ್ತಿ ಮಾಡುವಂಥಾ ಡೈಲಾಗುಗಳು ಸೇರಿದಂತೆ ಎಲ್ಲವೂ ಇರುವ ಈ ಚಿತ್ರವನ್ನು ಪ್ರತಿಯೊಬ್ಬರೂ ಎಂಜಾಯ್ ಮಾಡುತ್ತಾ ನೋಡಬಹುದು. ಬರೀ ಸ್ನೇಹಿತರೊಂದಿಗೆ ಮಾತ್ರವಲ್ಲದೆ, ಮನೆಯಲ್ಲಿರುವ ನಿಮ್ಮ ಅಜ್ಜಿ ತಾತಂದಿರನ್ನೂ ಥಿಯೇಟರಿಗೆ ಕರೆದೊಯ್ಯಬಹುದು.

ಥಿಯೇಟರಿನಲ್ಲಿ ಕೂತು ಸಿನಿಮಾ ನೋಡಿಕೊಂಡು ವಾಪಾಸು ಬರೋ ಹೊತ್ತಿಗೆ ಪಕ್ಕದಲ್ಲಿದ್ದವರೂ ನಿಮಗೆ ಸ್ನೇಹಿತರಾಗಿಬಿಟ್ಟಿರುತ್ತಾರೆ. ಎರಡೂಕಾಲು ಗಂಟೆ ಭರ್ಜರಿಯಾಗಿ ನಕ್ಕು ನಕ್ಕೂ ಸುಸ್ತಾಗಿ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಗೆ ದೂಡುವಂತಾ ಮನರಂಜನೆ ನನ್ನ ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿದೆ.
* * *

ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತಯಾರಾಗಿರುವ ಈ ಚಿತ್ರವನ್ನು ಕಳೆದ ಏಳೆಂಟು ವರ್ಷಗಳಿಂದ ಸೃಜನ್ ಲೋಕೇಶ್ ನಿರ್ಮಾಣದ ಬಹುತೇಕ ಎಲ್ಲ ಟಿವಿಶೋಗಳು ಮತ್ತು ಧಾರಾವಾಹಿಗಳ ಕ್ರಿಯೇಟೀವ್ ಹೆಡ್ ಆಗಿರುವ ತೇಜಸ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಹೆಚ್.ಸಿ. ವೇಣು ಛಾಯಾಗ್ರಹಣವಿದೆ.
ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಶೇಷತೆಗಳಿವೆ. ಅವೆಲ್ಲಾ ಏನು ಅನ್ನೋದು ಸದ್ಯದಲ್ಲೇ ನಿಮಗೆ ತಿಳಿಯಲಿದೆ!
No Comment! Be the first one.