ಸಿನಿಮಾ ಮಂದಿ ಯಾವಾಗ ಸುತ್ತಾಡುತ್ತಾರೋ, ಯಾವಾಗ ಕಿತ್ತಾಡುತ್ತಾರೋ ಗೊತ್ತಿಲ್ಲದೇ ಯಾವಾಗ ಹಸೆ ಮಣೆ ಏರಿ ಇಳಿದಿರುತ್ತಾರೋ ಎಲ್ಲವೂ ನಿಗೂಢ. ಕೆಲವೊಮ್ಮೆ ಆಶ್ಚರ್ಯ ಕೂಡ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ರಿಲೇಷನ್ ಶಿಪ್ ನಲ್ಲಿದ್ದು, ಜೊತೆ ಜೊತೆಗೆ ಸುಮಾರು ಕಾರ್ಯಕ್ರಮಗಳಲ್ಲಿ ಸುತ್ತುತ್ತಿದ್ದದ್ದು, ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದದ್ದೇನೂ ಮುಚ್ಚಿಡುವ ಸಂಗತಿಯಲ್ಲ. ಆದರೆ ಸಡನ್ ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ ಆಲಿಯಾ ಮತ್ತು ರಣಬೀರ್ ಮದುವೆಗೆ ರೆಡಿಯಾಗಿದ್ದಾರಂತೆ.
ಹೌದು, ಸ್ವಿಡ್ಜರ್ಲೆಂಡ್ ನ ಸೇಂಟ್ ಮೋರ್ಟಿಜ್ ಎಂಬಲ್ಲಿ ರಣಬೀರ್ ಆಲಿಯಾ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಅದಾದ ಬಳಿಕ ಆಪ್ತರಿಗಾಗಿ ಗ್ರಾಂಡ್ ಪಾರ್ಟಿಯನ್ನು ಕೊಟ್ಟಿದ್ದಾರೆ ಎಂಬುದಾಗಿಯೂ ಗಾಳಿ ಸುದ್ದಿ ಎದ್ದಿದೆ. ಆದರೆ ಈ ಬಗ್ಗೆ ಇಬ್ಬರಿಂದಲೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಗದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆರ್ಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಮತ್ತು ಅಕ್ಕಿನೇನಿ ನಾಗಾರ್ಜುನ್ ಕೂಡಾ ಅಭಿನಯಿಸಿದ್ದಾರೆ.
No Comment! Be the first one.