ಫೇಸ್ ಟು ಫೇಸ್ ಚಿತ್ರ ಅಬ್ಬರದೊಂದಿಗೇ ತೆರೆಗಾಣಲು ರೆಡಿಯಾಗಿದೆ. ಈ ತಿಂಗಳ ಹದಿನೈದನೇ ತಾರೀಕಿನಂದು ಈ ಚಿತ್ರ ರಾಜ್ಯಾಧ್ಯಂತ ತೆರೆ ಕಾಣಲಿದೆ. ಸಂದೀಪ್ ಜನಾರ್ಧನ್ ನಿರ್ದೇಶನದ ಈ ಚಿತ್ರದಲ್ಲಿ ಹೀರೋ ರೋಹಿತ್ ಗೆ ಇಬ್ಬಿಬ್ಬರು ಹೀರೋಯಿನ್ನುಗಳಿದ್ದಾರೆ. ಅವರಿಬ್ಬರೂ ಕೂಡಾ ಇಡೀ ಕಥೆಯ ಕೇಂದ್ರ ಬಿಂದುಗಳೇ!
ಪೂರ್ವಿ ಜೋಶಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ಈ ಚಿತ್ರದ ನಾಯಕಿಯರು. ಎರಡು ಜಡೆ ಸೇರಿದರೆ ಕದನ ಗ್ಯಾರೆಂಟಿ ಎಂಬ ಪಾರಂಪರಿಕ ನಂಬಿಕೆ ಇದೆಯಲ್ಲಾ? ಅದು ಈ ಸಿನಿಮಾ ವಿಚಾರದಲ್ಲಿಯೂ ನಿಜವಾಗಿದೆ. ಯಾಕಂದ್ರೆ ಇವರಿಬ್ಬರದ್ದೂ ಇಲ್ಲಿ ತದ್ವಿರುದ್ಧ ಪಾತ್ರ.ದಿವ್ಯಾ ಉರುಡಗ ಯಾವುದಕ್ಕೂ ಕೇರು ಮಾಡದ ಬಜಾರಿ ಹುಡುಗಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ಆದರೆ ಪೂರ್ವಿ ಜೋಶಿ ಮೃದು ಸ್ವಭಾವದ, ಭಾವನೆಗಳಿಗೆ ಬೆಲೆ ಕೊಡೋ ಹುಡುಗಿಯ ಪಾತ್ರ. ಅದಾಗಲೇ ಹಾದಿ ಬಿಟ್ಟು ಓಲಾಡುತ್ತಿರೋ ನಾಯಕ ಇಂಥಾ ಇಬ್ಬರು ಹುಡುಗೀರ ನಡುವೆ ಸಿಕ್ಕು ನಲುಗೋ ಕಥನವನ್ನ ಭರ್ಜರಿ ಮನೋರಂಜನೆಯ ಮೂಲಕ ಇಲ್ಲಿ ಕಟ್ಟಿ ಕೊಡಲಾಗಿದೆಯಂತೆ.
ಹಾಗಂತ ಈ ಚಿತ್ರ ಬರೀ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಬೆರಗಾಗಿಸುವ ಅದೆಷ್ಟೋ ವಿಚಾರಗಳು ಫೇಸ್ ಟು ಫೇಸ್ ನಲ್ಲಿವೆ. ಅದೇನೆಂಬುದು ಇಷ್ಟರಲ್ಲಿಯೇ ಬಯಲಾಗಲಿದೆ