ವೈವಿಧ್ಯಮಯ ಕಥಾ ಹಂದರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ್ದ ಫೇಸ್ ಟು ಫೇಸ್ ಸಿನಿಮಾ ಈಗ ವಿಡಿಯೋ ಸಾಂಗೊಂದನ್ನು ರಿಲೀಸ್ ಮಾಡಿದೆ. ಹೌದು ನಿಂದೇ ಹಾವಳಿ ಎಂಬ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಪಿ ಆರ್ ಕೆ ಆಡಿಯೋದಲ್ಲಿ ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಅನನ್ಯ ಭಟ್ ಹಾಡಿದ್ದು, ಕವಿರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಉಪೇಂದ್ರ ಗರಡಿಯಲ್ಲಿ ಮಣ್ಣೊತ್ತಿದ್ದ ಸಂದೀಪ್ ಫೇಸ್ ಟು ಫೇಸ್ ಚಿತ್ರಕ್ಕೆ ನಿರ್ದೆಶನ ಮಾಡುತ್ತಿದ್ದಾರೆ. ಸಂದೀಪ್ ಗಿದು ಚೊಚ್ಚಲ ನಿರ್ದೆಶನದ ಸಿನಿಮಾವಾಗಿದೆ. ಚಿತ್ರದಲ್ಲಿ ಈ ಹಿಂದೆ ಸಾಹೇಬ, ದೃಶ್ಯ, ಚೂರಿಕಟ್ಟೆ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದ ರೋಹಿತ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ನಾಯಕಿಯರಾಗಿ ಪೂರ್ವಿ ಮತ್ತು ದಿವ್ಯಾ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಈ ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದಾರೆ.
Leave a Reply
You must be logged in to post a comment.