ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಅಡೆತಡೆಯಿಲ್ಲದೆ ಮುಂದುವರೆಯುತ್ತಿದೆ. ಇದೀಗ ಹೊಸಬರೇ ಹೆಚ್ಚಾಗಿರೋ ತಂಡವೊಂದು ಫೇಸ್ ಟು ಫೇಸ್ ಎಂಬ ಚಿತ್ರವನ್ನು ರೂಪಿಸಿ ಹಾಡುಗಳನ್ನು ಅನಾವರಣಗೊಳಿಸಿದೆ. ಈ ಮೂಲಕವೇ ಸದ್ದು ಶುರುವಿಟ್ಟಿದೆ!
ಸುಮಿತ್ರಾ ಜನಾರ್ಧನ್ ನಿರ್ಮಾಣದ ಫೇಸ್ ಟು ಫೇಸ್ ಚಿತ್ರವನ್ನು ಹೊಸಾ ಹುಡುಗ ಸಂದೀಪ್ ಜನಾರ್ಧನ್ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳನ್ನು ಹಿರಿಯ ನಟ ಶಿವರಾಂ ಅವರು ಬಿಡುಗಡೆಗೊಳಿಸಿದ್ದಾರೆ. ಪ್ರಥಮ್, ಅನುಪಮಾ, ಜಯಶ್ರೀ, ಕೃಷಿ ತಾಪಂಡ ಮುಂತಾದ ಬಿಗ್ ಬಾಸ್ ಸ್ಪರ್ಧಿಗಳೂ ಈ ಸಮಾರಂಭದಲ್ಲಿ ಹಾಜರಿದ್ದು ಹೊಸಬರ ತಂಡವನ್ನು ಪ್ರೋತ್ಸಾಹಿಸಿದ್ದಾರೆ.
ಈ ಹಿಂದೆ ಉಪೇಂದ್ರ ಅವರ ಬಳಿ ಕಾರ್ಯ ನಿರ್ವಹಿಸಿದ್ದ ಸಂದೀಪ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸುಂದಸರವಾದ ಪ್ರೇಮಕಥಾನಕ ವೊಂದನ್ನು ಹಾಸ್ಯ ಬೆರೆಸಿ ಹೇಳೋ ಪ್ರಯತ್ನವನ್ನಿಲ್ಲಿ ನಿರ್ದೇಶಕರು ಮಾಡಿದ್ದಾರಂತೆ. ದೃಷ್ಯ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿಒದ್ದ ರೋಹಿತ್ ಭಾನುಪ್ರಕಾಶ್ ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. ಪೂರ್ವಿ ಜೋಷಿ ಹಾಗೂ ಈ ಹಿಂದೆ ಹುಲಿರಾಯ ಚಿತ್ರದ ನಾಯಕಾಯಾಗಿದ್ದ ದಿವ್ಯಾ ಉರುಡಗ ನಾಯಕಿಯರಾಗಿ ನಟಿಸಿದ್ದಾರೆ.
ಈಗಾಗಲೇ ಈ ಚಿತ್ರದ ಹಾಡುಗಳು ಕ್ರೇಜ್ ಹುಟ್ಟು ಹಾಕಿವೆ. ಈ ಮೂಲಕವೇ ಈ ಚಿತ್ರ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಫೇಸ್ ಟು ಫೇಸ್ ಚಿತ್ರಕ್ಕೆ ಜಯಂತ ಕಾಯ್ಕಿಣಿ ಗೂ ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಚೆಕ್ಕಮಗಳೂರು, ಬೆಂಗಳೂರು ಮತ್ತು ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಈ ಚಿತ್ರ ಶೀಘ್ರದಲ್ಲಿಯೇ ತೆರೆ ಕಾಣಲಿದೆ.
#