ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ. ಜನವರಿ 21 ರಂದು ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಯಿತು. ಅಂದು ಪತ್ನಿ ಅಶ್ವಿನಿ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಶುಭ ಕೋರಿದರು.
ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ ಬರೆದಿರುವ ಮಾಸ್ತಿ ಹಾಗೂ ಕಲಾವಿದರಾದ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯತ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾ ಗೌಡ ಉಪಸ್ಥಿತರಿದ್ದರು. ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ . ಈ ಚಿತ್ರದ ನಿರ್ಮಾಪಕರು.
ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಎಸ್ ಈ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ಈ ಚಿತ್ರದ ನಾಯಕ ಕೂಡ. ಅಮೃತ ಅಯ್ಯಂಗಾರ್ ಫ್ಯಾಮಿಲಿ ಪ್ಯಾಕ್ ನ ನಾಯಕಿ. ರಂಗಾಯಣ ರಘು, ಅಚ್ಯುತಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾಗೌಡ, ನಾಗಭೂಷಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು. ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಮಾತು ಬರೆದಿದ್ದಾರೆ.
No Comment! Be the first one.