ಕರಾಟೆ ಕಿಂಗ್ ಶಂಕರ್ ನಾಗ್ ಅನ್ನೋ ನಟ ಕಣ್ಮರೆಯಾಗಿ ತಲೆಮಾರುಗಳುರುಳಿದರೂ ಅವರ ಮೇಲಿನ ಅಭಿಮಾನದ ತೀವ್ರತೆ ಮಾತ್ರ ಹಾಗೇ ಉಳಿದುಕೊಂಡಿದೆ.

ಶಂಕರ್ ನಾಗ್ ಅವರ ಮೇಲಿನ ಅಭಿಮಾನದ ಸಂಕೇತವಾಗಿ ರಾಜ್ಯಾದ್ಯಂತ ಅಭಿಮಾನಿಗಳು ನಿರ್ಮಿಸಿರುವ ಪುತ್ಥಳಿಗಳು, ಆಟೋ ಮೇಲಿನ ಸ್ಟಿಕರ್’ಗಳು, ಸಂಘ ಸಂಸ್ಥೆಗಳು ಮತ್ತು ಅವರು ನಡೆದುಕೊಂಡು ಬಂದಿರುವ ಸಮಾಜಮುಖಿ ಕಾರ್ಯಗಳು ಈ ನಟನನ್ನು ಯಾವತ್ತಿಗೂ ಜೀವಂತವಾಗಿಸಿದೆ.


ಇನ್ನು ಸಿನಿಮಾಗಳಲ್ಲೂ ಸಹ ಶಂಕರ್ ಅವರ ಕುರಿತ ಹಾಡುಗಳು, ಅಭಿಮಾನದ ಪರಿ ಆಗಾಗ ವ್ಯಕ್ತವಾಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ತೆರೆಗೆ ಬಂದಿದ್ದ ಕರ್ಷಣಂ ಚಿತ್ರದಲ್ಲಿಯೂ ನಾಯಕನಟ ಶಂಕರ್ ನಾಗ್ ಅಭಿಮಾನಿಯಾಗಿರುತ್ತಾನೆ ಅನ್ನೋದನ್ನಿಲ್ಲಿ ಸ್ಮರಿಸಬಹುದು. ಈಗ ‘ಫ್ಯಾನ್’ ಅನ್ನೋ ಚಿತ್ರ ತೆರೆಗೆ ಬರಲು ತಯಾರಾಗಿದ್ದು ಸದ್ಯ ಈ ಚಿತ್ರದ ಆಡಿಯೋ ರಿಲೀಸ್ ಆಗಿದೆ.
ಸಿಂಪಲ್ ಸ್ಟಾರ್ ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ ‘ಫ್ಯಾನ್’ ಚಿತ್ರದ ಹಾಡುಗಳನ್ನು ಮತ್ತು ವಿಡಿಯೋ ಸಾಂಗ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.
ವಿಕ್ರಂ-ಚಂದನ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ‘ನಾಲಿಗೆಗೆ ಜ್ವರ ಬಂದಂತಿದೆ. ಪದಗಳು ಮಲಗಿವೆ’ ಎನ್ನುವ ಗಜ಼ಲ್ ಶೈಲಿಯ ಟೈಟಲ್ ಸಾಂಗಿನ ವಿಡಿಯೋ ಕೂಡಾ ರಿಲೀಸಾಗಿದೆ.


“ಯಾವುದೇ ಪೂರ್ವ ತಯಾರಿ ಇಲ್ಲದೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹಾಡಿದು. ಮಾತಾಡಿಕೊಂಡು ಬರೋಣ ಅಂತಾ ಭಟ್ರ ಮನೆಗೆ ಹೋಗಿದ್ವಿ. ಈಗಲೇ ಹಾಡು ಬರೀತೀನಿ ಅಂದ್ರು. ನಾವೂ ಅಲ್ಲೇ ಟ್ಯೂನ್ ಹಾಕುತ್ತಾ ಹೋದ್ವಿ. ಕೆಲವೇ ಹೊತ್ತಿನಲ್ಲಿ ಹಾಡು ರೂಪುಗೊಂಡಿತು” ಎಂದು ವಿಕ್ರಂ ಮತ್ತು ಚಂದನ ಹೇಳಿಕೊಂಡರು.
ಎಸ್ ಎಲ್ ಎನ್ ಸಿನಿಮಾಸ್ ಬ್ಯಾನರಿನ ಅಡಿಯಲ್ಲಿ ಮೂಡಿಬಂದಿರುವ ಫ್ಯಾನ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಶಾಸಕ ಎಂ. ಕೃಷ್ಣಪ್ಪ, ಚಿನ್ನೇಗೌಡ, ಬಾಮಾ ಹರೀಶ್, ಬಾಮಾ ಗಿರೀಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

CG ARUN

ಕಸದ ರಾಶಿಯ ಮಧ್ಯೆ ಪ್ರಿಯಾಂಕ ಉಪ್ಪಿ ನಿಂತರೇಕೆ

Previous article

ನಾಳೆ ರಾಂಧವನಿಂದ ಶಾಕಿಂಗ್ ವಿಡಿಯೋ!

Next article

You may also like

Comments

Leave a reply

Your email address will not be published. Required fields are marked *