ಮೊದಲೆಲ್ಲ ಹೀಗಿರಲಿಲ್ಲ. ಜನರ ಮನಸ್ಥಿತಿಯಲ್ಲಿ ಯಾವುದೇ ಹೀರೋ ರಿಜಿಸ್ಟಾರ್ ಆಗಿಬಿಟ್ಟರೆ ಅದೇ ಹೀರೋ ನ ಹತ್ತಾರು ಸಿನಿಮಾಗಳು ಬ್ಯಾಕ್ ಟು ಬರುತ್ತಿದ್ದವು. ಸೂಪರ್ ಹಿಟ್ ಆಗುತ್ತಿದ್ದವು ಕೂಡ. ಆದರೆ ಈಗ ಆ ಪರಿಸ್ಥಿತಿಯಿಲ್ಲ. ಸೇಮ್ ಹೀರೋ ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ದಿ ಬೆಸ್ಟ್ ಸಿನಿಮಾವನ್ನಷ್ಟೇ ನೋಡುತ್ತಾರೆ. ಮೆಚ್ಚುತ್ತಾರೆ. ಇಂತಹ ಸೂಕ್ಷ್ಮಗಳನೆಲ್ಲ ಅರಿತ ಮೂವಿ ಮೇಕರ್ಸ್ ಅಂತಹ ಯಾವುದೇ ಗೋಜಿಗೂ ಹೋಗುವುದಿಲ್ಲ.
ಬಹುತೇಕ ಹೊಸ ಹೊಸ ಮುಖಗಳನ್ನೇ ಆರಿಸಿಕೊಂಡು ಸದಬಿರುಚಿಯ ಕಮರ್ಷಿಯಲ್ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಕಥೆ ಸ್ಟ್ರಾಂಗಿದ್ದರೆ ಸಕ್ಸಸ್ಸು ಆಗಿದ್ದಾರೆ.
ಸದ್ಯ ಶ್ರೀನಿವಾಸ್ ಮೂವೀಸ್ ಇದೇ ದಾರಿಯಲ್ಲಿದ್ದು ಯುವ ಪಡೆಗಳನ್ನೇ ಸೇರಿಸಿಕೊಂಡ ಹೊಸ ಸಿನಿಮಾವೊಂದನ್ನು ರೆಡಿಮಾಡುತ್ತಿದೆ. ಈ ಚಿತ್ರಕ್ಕೆ ಚಿತ್ರಕತೆ ಬರೆದು ಕೃಷ್ಣ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ್ ಬ್ಯಾನರ್ ನ ಮೂಲಕ ಶ್ರೀನಿವಾಸ್. ಜಿ ಮತ್ತು ರಿಜ್ವಾನ್ ಸಿನಿಮಾ ನಿರ್ಮಾಣ ಮಾಡುವ ಹೊಣೆ ಹೊತ್ತಿದ್ದಾರೆ. ಸುರೇಶ್ ಬಾಬ್ಲಿ ಸಂಗೀತ, ಎಂ.ಐ.ಡಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರೊಡಕ್ಷನ್ ನಂ 1 ಎಂದಷ್ಟೇ ಈ ಸಿನಿಮಾಕ್ಕೆ ಹೆಸರಿಡಲಾಗಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಾಕಷ್ಟು ಕೌತುಕವನ್ನು ಹುಟ್ಟುಹಾಕಿದೆ. ಶೀಘ್ರದಲ್ಲಿ ಚಿತ್ರದ ಟೈಟಲನ್ನು ಸಿನಿಮಾ ಕುರಿತಾದ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಲಿದೆ.
No Comment! Be the first one.