ಹಾಲಿವುಡ್ ನಲ್ಲಿ ತೊಂಬತ್ತರ ದಶಕದಲ್ಲಿ ತೆರೆಕಂಡ ಫಾರೆಸ್ಟ್ ಗಂಪ್ ಎಂಬ ಸೂಪರ್ ಹಿಟ್ ಕಾಮಿಡಿ ಸಿನಿಮಾ ಹಿಂದಿಗೆ ರಿಮೇಕ್ ಆಗಲಿದೆ. ಈ ಚಿತ್ರದಲ್ಲಿ ಕರೀನಾ ಕಪೂರ್ ನಾಯಕಿಯಾಗಿ ನಟಿಸುವ ಸಾಧ್ಯತೆಯೂ ಇದೆ. ಹಾಲಿವುಡ್ ನಲ್ಲಿ ನಟ ಟಾಮ್ ಹಂಕ್ ಮಾಡಿದ ಪಾತ್ರವನ್ನು ಆಮೀರ್ ಖಾನ್ ಮಾಡುವುದು ನಿಕ್ಕಿಯಾಗಿದೆ. ಹಿಂದಿಯಲ್ಲಿ ಲಾಲ್‌ ಸಿಂಗ್‌ ಛಡ್ಡಾ ಎಂಬ ಟೈಟಲ್‌ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾವನ್ನು ಅದ್ವೈತ್‌ ಚೌಹಾಣ್‌ ನಿರ್ದೇಶಿಸುತ್ತಿದ್ದಾರೆ. ಥ್ರೀ ಈಡಿಯಟ್ಸ್ ಸಿನಿಮಾದ ನಂತರ ಕರೀನಾ ಕಪೂರ್ ಮತ್ತು ಅಮೀರ್ ಖಾನ್ ಜೋಡಿ ಮತ್ತೆ ಒಂದಾಗಲಿರುವುದು ವಿಶೇಷ.

ಲಾಲ್‌ ಸಿಂಗ್‌ ಛಡ್ಡಾದಲ್ಲಿ ಕರೀನಾ ನಟಿಸುವುದು ಖಚಿತವಾದರೆ ಈ ಜೋಡಿಯ ಆನ್‌ಸ್ಟ್ರೀನ್‌ ಕೆಮಿಸ್ಟ್ರಿ ಬರೋಬ್ಬರಿ ಹತ್ತು ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಮೋಡಿ ಮಾಡುವ ಸಾಧ್ಯತೆ ಇದೆ. ಸ್ವತಃ ಆಮಿರ್‌ ಖಾನ್‌ ಅವರೇ ಈ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸಲಿ ಎಂದು ಬಯಸಿದ್ದಾರಂತೆ. ಸದ್ಯಕ್ಕೆ ಅಂಗ್ರೇಜಿ ಮೀಡಿಯಂ ಸಿನಿಮಾ ಶೂಟಿಂಗ್‌ಗಾಗಿ ಲಂಡನ್‌ನಲ್ಲಿರುವ ಕರೀನಾ ಅಲ್ಲಿಂದ ಬಂದ ನಂತರವೇ ಈ ಸಿನಿಮಾಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದೆವ್ವದ ಪೋಷಾಕು ತೊಟ್ಟ ಮಾದಕ ಚೆಲುವೆ!

Previous article

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಗೀತಾ ಟೀಸರ್!

Next article

You may also like

Comments

Leave a reply

Your email address will not be published. Required fields are marked *