ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಇಡೀ ಭಾರತೀಯ ಚಿತ್ರರಂಗದ ಗಣ್ಯರೆಲ್ಲ ಕಂಬನಿ ಮಿಡಿದಿದ್ದರು. ಅನೇಕರು ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ ಬಂದು ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಆದರೆ, ಸೂತಕದ ಮನೆಯತ್ತು ಸುಳಿಯದೆ ದೆಹಲಿಯಲ್ಲೆಲ್ಲೋ ಕೂತು ಮೂಳೆ ಕಾಯಿಲೆಯ ನೆಪ ಹೇಳಿ ನುಣುಚಿಕೊಂಡಿದ್ದವಳು ಮಾಜಿ ನಟಿ ಕಂ ಹಾಲಿ ರಾಜಕಾರಣಿ ರಮ್ಯಾ!
ನಟಿಯಾಗಿದ್ದ ರಮ್ಯಾ ಕಾಂಗ್ರೆಸ್ ಸೇರಿಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿದ್ದಳಲ್ಲಾ? ಅದರ ಹಿಂದಿದ್ದದ್ದು ಅಂಬರೀಶ್ ಎಂಬ ಶಕ್ತಿ. ಆದರೆ ಅಂಬಿ ನಿಧನ ಹೊಂದಿದ್ದಾಗ ಈಕೆ ಅತ್ತ ಸುಳಿದಿರಲೂ ಇಲ್ಲ. ಈ ಬಗ್ಗೆ ಅಂಬಿ ಅಭಿಮಾನಿಗಳೆಲ್ಲ ರೊಚ್ಚಿಗೇಳುತ್ತಲೇ ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ಬ್ಯಾಂಡೇಜು ಸುತ್ತಿದ ಹೆಬ್ಬೆರಳಿನ ಫೋಟೋ ಹಾಕಿಕೊಂಡು ಕಾಯಿಲೆಯ ಕಥೆ ಹೇಳಿದ್ದಳು!
ತನಗೆ ಮೂಳೆ ಸಂಬಂಧಿತವಾದ ಆಸ್ಟಿಯೋಕ್ಲ್ಯಾಟೋಮ ಎಂಬ ಕಾಯಿಲೆ ಇದೆ. ಇದು ಮೂಳೆ ಸಂಬಂಧಿತ ರೋಗ. ಕೊಂಚ ಯಾಮಾರಿದ್ರೆ ಕ್ಯಾನ್ಸರ್ ಕಾಯಿಲೆ ಬಂದು ಬಿಡುತ್ತಿತ್ತು ಅಂತೆಲ್ಲ ಸಿಂಪಥಿ ಗಿಟ್ಟಿಸಿಕೊಳ್ಳಲು ನೋಡಿದ್ದಳು. ಅದಾಗಿ ತಿಂಗಳು ಕಳೆಯೋ ಮುನ್ನವೇ ರಮ್ಯಾ ದುಬೈ ಪ್ರವಾಸದಲ್ಲಿದ್ದಾಳೆ. ಈ ಬಗೆಗಿನ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ನಡಿಗರೆಲ್ಲ ಇದಕ್ಕೆ ರೋಷಾವೇಷದಿಂದ ಪ್ರತಿಕ್ರಿಯಿಸುತ್ತಾ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈವತ್ತು ರಾಹುಲ್ ಗಾಂಧಿ ದುಬೈಗೆ ತೆರಳಿದ್ದಾರೆ. ಒಂದು ದಿನ ಮುಂಚಿತವಾಗಿಯೇ ದುಬೈಗೆ ಹೋಗಿದ್ದ ಪದ್ಮಾವತಿ ಬೀಚುಗಳಗುಂಟ ಓಡಾಡಿ, ತಾನೇ ಖುದ್ದಾಗಿ ರಾಹುಲ್ ಗಾಂಧಿಗೆ ಸ್ವಾಗತ ನೀಡಿದ್ದಾಳೆ. ಈಕೆ ದುಬೈನಲ್ಲಿ ಸುತ್ತಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಮೂಲ ಸ್ವತಃ ಆಕೆಯೇ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾಳೆ.
ಅಂಬರೀಶ್ ಅಂತಿಮ ದರ್ಶನಕ್ಕೆ ಕಾಯಿಲೆಯಿರೋ ನಟ ನಟಿಯರೂ ಬಂದಿದ್ದರು. ವ್ಹೀಲ್ ಚೇರಿನಲ್ಲಿ ಬಂದು ದರ್ಶನ ಪಡೆದವರೂ ಇದ್ದಾರೆ. ರಮ್ಯಾಗೇನಾದರೂ ಕೊಂಚ ಕೃತಜ್ಞತೆ ಇದ್ದಿದ್ದರೆ ವ್ಹೀಲ್ ಚೇರಿನಲ್ಲಾದರೂ ಬರ ಬಹುದಿತ್ತಲ್ಲಾ ಅಂತ ಬಹುತೇಕರು ಹೇಳಿದ್ದರು. ಆಗ ಮಾರಣಾಂತಿಕ ಮೂಳೆ ಕಾಯಿಲೆಯ ಕಥೆ ಹೇಳಿದ್ದಳಲ್ಲಾ ರಮ್ಯಾ? ಇದೀಗ ಒಂದೇ ತಿಂಗಳಿಗೆ ಆ ಕಾಯಿಲೆ ವಾಸಿಯಾಯ್ತಾ ಅಂತ ಜನ ಪ್ರಶ್ನಿಸುತ್ತಿದ್ದಾರೆ. #
No Comment! Be the first one.