ಹೊಸ ಹೊಸ ಬಗೆಯ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಸ್ಟಾರ್ ಸುವರ್ಣ ವಾಹಿನಿ ಸದಾ ಮುಂದಿರುತ್ತದೆ. ಹಾಗಾಗಿ ಅವರು ಜನಪ್ರಿಯ ನಿರ್ದೇಶಕ ಸಂಜೀವ್ ಅವರ ಮಾರ್ಗದರ್ಶನದಲ್ಲಿ ‘ಗಾನ ಬಜಾನಾ’  ಎಂಬ ಅಪ್ಪಟ ಮನರಂಜನಗೇ ಮೀಸಲಾದ ಕಾರ್ಯಕ್ರಮವನ್ನು ಕನ್ನಡದ ಪ್ರಿಯ ವೀಕ್ಷಕರಿಗೆ ಕೊಡಲು ಮುಂದಾಗಿದ್ದಾರೆ. ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿ ಕೊಂಡಿರುವುದು ಲೂಸ್ ಮಾದ ಖ್ಯಾತಿಯ ಚಲನಚಿತ್ರ ನಟ ಯೋಗಿ. “ನನ್ನ ವ್ಯಕ್ತಿತ್ವಕ್ಕೆ , ಕೊಡಬಹುದಾದ ಮನರಂಜನೆಗೆ ಹೇಳಿ ಮಾಡಿಸಿದ ಹಾಗಿತ್ತು ಈ ಕಾರ್ಯಕ್ರಮ. ಹಾಗಾಗಿ ನಾನು ಇದರ ನಿರೂಪಣೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡೆ” ಎನ್ನುತ್ತಾರೆ ಮಾಸ್ ಯೋಗಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುಮಾರು 13 ವಾರಗಳ ಕಾಲ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ಜಗತ್ತಿನ ಬಹುತೇಕ ಜನಪ್ರಿಯ ಕಲಾವಿದ, ಕಲಾವಿದೆಯರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶ್ರೀಮುರಳಿ,  ಶ್ರೀ ಲೀಲಾ,  ವಸಿಷ್ಟ ಸಿಂಹ , ಸತೀಶ್ ನೀನಾಸಂ , ರಾಧಿಕಾ ಚೇತನ್,  ಅದಿತಿ ಪ್ರಭುದೇವ,  ಸೋನು ಗೌಡ,  ಶುಭ ಪೂಂಜಾ,  ಮಿತ್ರ,  ಅಪರ್ಣ ಮೊದಲಾದವರು ಗಾನಬಜಾನ‌ದ ಚಿತ್ರೀಕೃತ ಪ್ರಕರಣಗಳಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಹತ್ತು ಗಂಟೆಯ ಅವಧಿಯಲ್ಲಿ ಪ್ರಸಾರವಾಗಲಿರುವ ‘ಗಾನಬಜಾನ’ ಕಾರ್ಯಕ್ರಮದಲ್ಲಿ , ಎರಡು ತಂಡಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿದ್ದು , ತಲಾ ಮೂರು ಮಂದಿ ಸ್ಪರ್ಧಾಳುಗಳು ಒಂದೊಂದೂ ಗುಂಪಿನಲ್ಲಿ ಇರುತ್ತಾರೆ.

ಸುಮಾರು 10 ಲಕ್ಷ ರೂಪಾಯಿಗಳವರೆಗೆ ಗೆಲ್ಲುವ , ಅದೃಷ್ಟದ ಕಣ್ಣುಮುಚ್ಚಾಲೆಯ ಆಟ ಇದಾಗಿದ್ದು,  “ಕನ್ನಡದ ಪ್ರಿಯ ವೀಕ್ಷಕರಿಗೆ , ಸದಭಿರುಚಿಯ , ಸಭ್ಯ,  ಮನರಂಜನೆಯ ಕಾರ್ಯಕ್ರಮವನ್ನು ಕೊಡುವುದಷ್ಟೇ ನಮ್ಮ ಉದ್ದೇಶವಾಗಿದೆ” ಎನ್ನುತ್ತಾರೆ ವಾಹಿನಿಯ ಬಿಜಿನೆಸ್ ಹೆಡ್ ಆದ ಸಾಯಿ ಪ್ರಸಾದ್. “ಇದೇ ನವೆಂಬರ್ 9 ರ ಶನಿವಾರ  ಆರಂಭವವಾಗಿರುವ ಮೊದಲ ಎಪಿಸೋಡ್ ನ ದಿನವೇ ಕಾಕತಾಳಿಯವಾಗಿ ಖ್ಯಾತ ನಟ ದಿವಂಗತ ಶಂಕರ್ ನಾಗ್ ಅವರ ಹುಟ್ಟಿದ ದಿನವಾಗಿದ್ದು, ಅದನ್ನು‌ ‘ಗಾನಬಜಾನ’ ಕಾರ್ಯಕ್ರಮದ ವಿಶೇಷವೆಂದು ಕೊಳ್ಳುತ್ತೇವೆ’ ಎಂದವರು ಯೋಗಿ. “ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ವಿ ಬ್ರೇಕ್ ಆಲ್ ದ ಓಲ್ಡ್ ರೆಕಾರ್ಡ್ಸ್” ಎನ್ನುತ್ತಾರೆ ನಿರ್ದೇಶಕ ಸಂಜೀವ್. ಸಂಗೀತ ನಿರೂಪಿಸಿದ ಈ ಕಾರ್ಯಕ್ರಮವನ್ನು ವೀಕ್ಷಕರಿಗೆ ಸಿದ್ಧಪಡಿಸಿರುವವರು ದಿವ್ಯಾ ರಾಮ್ ಟಾಕೀಸ್ ನ ಅನುಭವೀ ತಂಡದವರು

CG ARUN

ಆ ಮೂಟೆಯಲ್ಲಿ ಏನಿತ್ತು ಗೊತ್ತಾ?

Previous article

ರಚಿತಾ ಸಹೋದರಿ ನಿತ್ಯಾ ಮದುವೆಯ ಸುತ್ತ…!

Next article

You may also like

Comments

Leave a reply

Your email address will not be published. Required fields are marked *