ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಜೂನ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್-ಹಾಡುಗಳಿಂದ ​ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಿನ್ನೆ ನೆರವೇರಿತು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ತಮ್ಮ ಸಿನಿಮಾ ನೋಡಿ ಬೆಂಬಲಿಸುವಂತೆ ಕೇಳಿಕೊಂಡರು.

ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, ಹೊಸತನದ ಹಂಬಲದಲ್ಲಿ ಚಿತ್ರತಂಡವಿದೆ.ಇದು ಎರಡು ವರ್ಷದ ಜರ್ನಿ. ಸಿನಿಮಾ ಸೂಪರ್ ಆಗಿದೆ. 80% ಸಿನಿಮಾಗಳನ್ನು ಮಾಡುತ್ತಿರುವವರು ನಮ್ಮಂತವರು. 20% ಸ್ಟಾರ್ ಸಿನಿಮಾಗಳು ಆಗ್ತಿವೆ. 80% ಪ್ರೋತ್ಸಾಹ ಕೊಟ್ರೆ 20 40 ಆಗುತ್ತದೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ. ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಗೆಲ್ಲುತ್ತದೆ. ನಿರ್ಮಾಪಕ ಗೆಲ್ಲುತ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

ಆದಿತಿ ಪ್ರಭುದೇವ್ ಮಾತನಾಡಿ, ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಒಂದು ಬ್ಯೂಟಿಫುಲ್ ಜರ್ನಿ. ಸುಮಾರು ವರ್ಷಗಳೇ‌ ಕಳೆದು ಹೋಗಿವೆ. ಕಾಲೇಜ್ ಗ್ಯಾಂಗ್ ಸ್ಟೋರಿ ಬಂದು. ಆ ಕೊರತೆಯನ್ನು ಈ ಸಿನಿಮಾ ನಿಗಿಸುತ್ತದೆ. ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರು ಸಿನಿಮಾ ಸಪೋರ್ಟ್ ಮಾಡಿ ಎಂದರು.

ಶ್ರೀ ಮಹಾದೇವ್, ಸಾಕಷ್ಟು ವರ್ಕ್ ಶಾಪ್ ಮಾಡಿ ಪಾತ್ರ ಮಾಡಿದ್ದೇನೆ. ನಿರ್ಮಾಪಕರು, ನಿರ್ದೇಶಕರು, ಕಥೆ ನಂಬಿ, ನನ್ನನ್ನು ನಂಬಿ ದುಡ್ಡ ಹಾಕಿದ್ದಾರೆ. ನನಗೆ ಇವರೆಲ್ಲಾ ತಂದೆ-ತಾಯಿ‌ ಸಮಾನ. ನನ್ನ ಕನಸು ಈ ಸಿನಿಮಾದಲ್ಲಿ ನನಸಾಗಿದೆ. ಅಪ್ಪು ಸರ್ ಕಂಠದಲ್ಲಿ ಮೂಡಿ ಬಂದಿರುವ ಹಾಡಿನ ಬಗ್ಗೆಯೂ ಮೆಲುಕು ಹಾಕಿದ ಶ್ರೀ, ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲ ಕೊಡಿ ಎಂದರು.

ಗಜಾನನ & ಗ್ಯಾಂಗ್’ ಟೈಟಲ್ ಹೇಳುವಂತೆ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಈ ಸಿನಿಮಾದಲ್ಲಿದೆ. ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ, ನಟ ಅಭಿಷೇಕ್‌ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯು ಎಸ್‌ ನಾಗೇಶ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರದ್ಯುತನ್‌ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್‌ಬಾಸ್‌ ಖ್ಯಾತಿಯ ರಘು ಗೌಡ, ಚೇತನ್‌ ದುರ್ಗ, ನಾಟ್ಯರಂಗ, ಅಶ್ವಿನ್‌ ಹಾಸನ್‌ ಹಾಗೂ ಶಮಂತ್‌ ಅಲಿಯಾಸ್‌ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನಕ್ಕು ನಗಿಸುತ್ತಲೇ ಕಾಡುವ ವ್ಹೀಲ್ ಚೇರ್ ರೋಮಿಯೋ!

Previous article

ಕಾಲೇಜು, ಗೌಜು ಗದ್ದಲಗಳ ನಡುವೆ ಇಷ್ಟವಾಗುವ ಗಜಾನನ ಗ್ಯಾಂಗ್!

Next article

You may also like

Comments

Leave a reply