ಪಂಚತಂತ್ರ ಚಿತ್ರದ ನಂತರ ವಿಕಟಕವಿ ಯೋಗರಾಜ್ ಭಟ್ ನಿರ್ದೆಶನ ಮಾಡುತ್ತಿರುವ ಹೊಸ ಸಿನಿಮಾ ಗಾಳಿಪಟ 2. ಈ ಮೊದಲು ಚಿತ್ರಕ್ಕೆ ಶರಣ್ ಹಾಗೂ ರಿಷಿ ಅಭಿನಯಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಈಗ ಅವರು ಚಿತ್ರದಿಂದ ಹೊರಬಂದಿದ್ದು, ಯೋಗರಾಜಭಟ್ಟರು ಮತ್ತೆ ಈ ಮೊದಲು ಗಾಳಿಪಟ ಹಾರಿಸಿದವರನ್ನೇ ಕರೆತಂದಿದ್ದಾರೆ.
ಯೆಸ್.. ಗಾಳಿಪಟ ಚಿತ್ರದಲ್ಲಿ ಅಭಿನಯಿಸಿದ್ದ ಗಣೇಶ್ ಹಾಗೂ ದಿಗಂತ್ ರನ್ನೇ ಗಾಳಿಪಟ 2 ಚಿತ್ರಕ್ಕೂ ಕರೆತರಲಾಗಿದ್ದು, ರಾಜೇಶ್ ಕೃಷ್ಣನ್ ಅವರ ಬದಲಿಗೆ ನಿರ್ದೇಶಕ ಪವನ್ ಕುಮಾರ್ ನಟಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ನಿಮ್ಮೆಲ್ಲರ ಆಶಯದಂತೆ ಮತ್ತೊಮ್ಮೆ ಗಾಳಿಪಟ ಹಾರಿಸಲು ನಾನು ಹಾಗೂ ಭಟ್ರು @yogarajofficial ಜೊತೆ ಸೇರಿದ್ದೇವೆ. ಮಹೇಶ್ ದಾನನ್ನವರ್ ನಿರ್ಮಾಣದಲ್ಲಿ ತಯಾರಾಗುವ ಈ ಗಾಳಿಪಟ ಇನ್ನೂ ಎತ್ತರಕ್ಕೆ ಹಾರಿ ನಿಮ್ಮೆಲ್ಲರನ್ನು ಮತ್ತಷ್ಟು ರಂಜಿಸಲಿದೆ. ನಿಮ್ಮೆಲ್ಲರ ಪ್ರೀತಿ,ಸಹಕಾರ ಸದಾ ಇರಲಿ 🙏 #Galipata2 pic.twitter.com/nDiTIE43Z5
— Ganesh (@Official_Ganesh) July 29, 2019
‘ನಿಮ್ಮೆಲ್ಲರ ಆಶಯದಂತೆ ಮತ್ತೊಮ್ಮೆ ಗಾಳಿಪಟ ಹಾರಿಸಲು ನಾನು ಹಾಗೂ ಭಟ್ರು @yogarajofficial ಜೊತೆ ಸೇರಿದ್ದೇವೆ. ಮಹೇಶ್ ದಾನನ್ನವರ್ ನಿರ್ಮಾಣದಲ್ಲಿ ತಯಾರಾಗುವ ಈ ಗಾಳಿಪಟ ಇನ್ನೂ ಎತ್ತರಕ್ಕೆ ಹಾರಿ ನಿಮ್ಮೆಲ್ಲರನ್ನು ಮತ್ತಷ್ಟು ರಂಜಿಸಲಿದೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ಸದಾ ಇರಲಿ’ ಎಂದು ಬರೆದುಕೊಂಡಿದ್ದಾರೆ.
No Comment! Be the first one.