ದೀರ್ಘಕಾಲದ ನಂತರ ಕಾಲಿವುಡ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ತಾಪ್ಸಿ ನಟನೆಯ ಗೇಮ್ ಓವರ್ ಸಿನಿಮಾ ಜೂನ್ 14ಕ್ಕೆ ರಿಲೀಸ್ ಆಗಲಿದೆ. ನಾಲ್ಕು ವರ್ಷಗಳ ಹಿಂದೆಯೇ ರೆಡಿಯಾಗಿದ್ದ ಈ ಸಿನಿಮಾಕ್ಕೆ ಸದ್ಯ ಬಿಡುಗಡೆ ಭಾಗ್ಯ ದೊರಕಿರುವುದು ನಿಜಕ್ಕೂ ಚಿತ್ರತಂಡಕ್ಕೆ ಸಂತಸ ತಂದಿದೆ. ಗೇಮ್ ಓವರ್ ಸಿನಿಮಾವನ್ನು ಅಶ್ವಿನ್ ಶರವಣನ್ ನಿರ್ದೇಶನ ಮಾಡುತ್ತಿದ್ದು, ಎಸ್. ಶಶಿಕಾಂತ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ತಾಪ್ಸಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೇಮ್ ಓವರ್ ತಾಪ್ಸಿಗೆ ತಮಿಳಿಗೆ ಮತ್ತೆ ಮರಳಲು ಉತ್ತಮ ಅವಕಾಶವನ್ನು ನೀಡಿದ್ದು, ತಾಪ್ಸಿ ವೃತ್ತಿಜೀವನದಲ್ಲಿ ಮತ್ತೊಂದು ಭಿನ್ನ ಚಿತ್ರವಾಗುವ ಲಕ್ಷಣವನ್ನು ಹೊಂದಿದೆ ಎನ್ನುವುದು ನಿರ್ದೇಶಕರ ಅಂಬೋಣ.
ಇನ್ನು ಗೇಮ್ ಓವರ್ ತಮಿಳು ಆಡಿಯನ್ಸ್ ಗೆ ಭಿನ್ನ ರೀತಿಯ ಎಕ್ಸ್ ಪೀರಿಯನ್ಸ್ ನೀಡಲಿದೆ. ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್, ಆಗಿರುವ ಈ ಚಿತ್ರ ಮಾಯಾ ಸಿನಿಮಾಕ್ಕಿಂತಲೂ ಭಿನ್ನ ಕಥಾ ಹಂದರವನ್ನು ಹೊಂದಿದೆ. ಇದು ಶರವಣನ್ ನಿರ್ದೇಶಿಸಿದ್ದ ಚೊಚ್ಚಲ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ನಯನಾತಾರ ಲೈಮ್ ಲೈಟ್ ಗೆ ಬಂದಿದ್ದರು. ಹಾಗಾಗಿ ಗೇಮ್ ಓವರ್ ಮೇಲೆ ಸಿನಿರಸಿಕರನ್ನು ಎಲ್ಲಿಲ್ಲದ ನಿರೀಕ್ಷೆ ಇದೆ.
Leave a Reply
You must be logged in to post a comment.