ಕಿಚ್ಚಾ ಸುದೀಪ್ಗ ಅಭಿನಯದ ಪೈಲ್ವಾನ್ ಈಗಾಗಲೇ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಈ ಮೂಲಕವೇ ಬಹು ನಿರೀಕ್ಷಿತ ಚಿತ್ರವಾಗಿಯೂ ಹೊರ ಹೊಮ್ಮಿದೆ. ಸುದೀಪ್ ಮೊದಲ ಸಲ ದೈಹಿಕ ಕಸರತ್ತುಗಳ ಮೂಲಕ ದೇಹವನ್ನ ಹುರಿಗೊಳಿಸಿಕೊಂಡು ಪೈಲ್ವಾನ್ ಮೂಲಕ ಅಖಾಡಕ್ಕಿಳಿದಿದ್ದಾರೆ. ಈವರೆಗೆ ಪೈಲ್ವಾನನ ಅಂಗಸೌಷ್ಠವ ನೋಡಿದ್ದವರಿಗೀಗ ಭರ್ಜರಿ ಸ್ಟೆಪ್ಸ್ ಕಣ್ತುಂಬಿಕೊಳ್ಳೋ ಕಾಲ ಹತ್ತಿರಾಗಿದೆ!
ಪೈಲ್ವಾನ್ ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇದನ್ನು ಕೂಡಾ ಮನಸೂರೆಗೊಳ್ಳುವ ರೀತಿಯಲ್ಲಿ ಚಿತ್ರೀಕರಿಸಲು ನಿರ್ದೇಶಕ ಕೃಷ್ಣ ತಯಾರಾಗಿದ್ದಾರೆ. ಇದಕ್ಕೆಂದೇ ಬಾಲಿವುಡ್ನ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಅವರನ್ನು ಕರೆತಂದಿದ್ದಾರೆ. ಪೈಲ್ವಾನನ ಟೈಟಲ್ ಸಾಂಗ್ ಗೆ ಗಣೇಶ್ ಆಚಾರ್ಯ ಅವರೇ ಕೋರಿಯೋಗ್ರಫಿ ಮಾಡಲಿದ್ದಾರೆ. ದಶಕಗಳಿಂದ ಬಾಲಿವುಇಡ್ ಸ್ಟಾರ್ಗಳನ್ನು ಕುಣಿಸುತ್ತಾ ಬಂದಿರೋ ಗಣೇಶ್ ಸ್ಟಾರ್ ಕೊರಿಯೋಗ್ರಾಫರ್. ಇವರ ನಿರ್ದೇಶನದಲ್ಲಿ ಸುದೀಪ್ ನೃತ್ಯದಲ್ಲಿಯೂ ಸೈ ಅನ್ನಿಸಿಕೊಳ್ಳಲಿದ್ದಾರೆ.
ಈವರೆಗೂ ಸುದೀಪ್ ಅವರು ತಮಗೆ ಡ್ಯಾನ್ಸ್ ಬರೋದಿಲ್ಲ ಅನ್ನೋದನ್ನು ಮಜವಾಗಿಯೇ ಹೇಳಿಕೊಂಣಡು ಬಂದಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮನ್ನು ತಾವೇ ತಮಾಶೆ ಮಾಡಿಕೊಂಡಿದ್ದಾರೆ. ಆದರೆ ಪೈಲ್ವಾನ್ ಸ್ಟೆಪ್ಸ್ ಅವರನ್ನು ಅದ್ಭುತ ಡ್ಯಾನ್ಸರ್ ಆಗಿಯೂ ತಯಾರು ಮಾಡಲಿದೆ ಅನ್ನೂ ಭರವಸೆ ನಿರ್ದೇಶಕ ಕೃಷ್ಣರಿಗಿದೆ.
#
No Comment! Be the first one.