ಗೋಲಕ್ಡನ್ ಸ್ಟಾರ್ ಗಣೇಶ್ ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದಲ್ಲಿ ಚಮಚ್ ಮಾಡಿ ಗೆದ್ದಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದದ್ದ ಆರೆಂಜ್ ಸಿನಿಮಾ ಒಂದು ರೇಂಜಿಗೆ ಗೆಲ್ಲುತ್ತಲೇ ಗಣೇಶ್ ಇದೀಗ ಗಿಮಿಕ್ ಮಾಡಲು ರೆಡಿಯಾಗಿದ್ದಾರೆ!
ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಚಿತ್ರಕ್ಕೆ ಗಿಮಿಕ್ ಅನ್ನೋ ಟೈಟಲ್ ನಿಗಧಿಯಾಗಿದೆ. ಇದರ ಆಕರ್ಷಕ ಪೋಸ್ಟರ್ ಒಂದನ್ನು ಚಿತ್ರತಂಡವೀಗ ಬಿಡುಗಡೆ ಮಾಡಿದೆ. ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಸಿನಿಮಾ ಕಾಮಿಡಿ ಟ್ರ್ಯಾಕಿನದ್ದು. ಆದರೆ ಅದರೊಂದಿಗೆ ಹಾರರ್ ವಿಶೇಷಣವೂ ಬ್ಲೆಂಡ್ ಆಗಿರೋದು ವಿಶೇಷ.
ಗಣೇಶ್ ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಾರೆಂಬ ಬಗ್ಗೆ ತಿಂಗಳ ಹಿಂದೆಯೇ ಸುದ್ದಿಯಾಗಿತ್ತಲ್ಲಾ? ಅದು ಗಿಮಿಕ್. ಇದು ಗಣೇಶ್ ಕೆರಿಯರಿನಲ್ಲಿ ಮೊದಲ ಹಾರರ್ ಚಿತ್ರವಾಗಿಯೂ ದಾಖಲಾಗಿದೆ. ಹೊಸಾ ಥರದ ಕಥೆ ಹೊಂದಿರೋ ಈ ಸಿನಿಮಾದ ಮುಖ್ಯಭಾಗದ ಚಿತ್ರೀಕರಣ ಶ್ರೀಲಂಕಾದಲ್ಲಿನ ಮನೆಯೊಂದರಲ್ಲಿ ನಡೆಯಲಿದೆಯಂತೆ. ದೀಪಕ್ ಸಾಮಿ ನಿರ್ಮಾಣದ ಗಿಮಿಕ್ನಲ್ಲಿ ಪಂಜಾಬಿ ಹುಡುಗಿ ರೋನಿಕಾ ಸಿಂಗ್ ಗಣೇಶ್ಗೆ ನಾಯಕಿಯಾಗಿ ನಟಿಸಲಿದ್ದಾರೆ. #
No Comment! Be the first one.