ಗೋಲ್ಡನ್ ಸ್ಟಾರ್ ನಟನೆಯ ಗೀತಾ ಸಿನಿಮಾದಲ್ಲಿ ಮಿನಿ ಗೋಲ್ಡನ್ ಸ್ಟಾರ್ ವಿಹಾನ್ ನಟಿಸಿರುವ ಫೋಟೋಗಳು ಹರಿದಾಡುತ್ತಿದ್ದವು. ಚಿತ್ರೀಕರಣವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಗೀತಾ ಡಬ್ಬಿಂಗ್ ಕೆಲಸಗಳಲ್ಲಿ ನಿರತವಾಗಿದೆ. ಈ ಮಧ್ಯೆ ತಮ್ಮ ತಂದೆಯ ಜತೆಗೆ ವಿಹಾನ್ ಕೂಡ ಡಬ್ಬಿಂಗ್ ಮಾಡಿದ್ದಾರೆ. ಮೈ ಮುಂದೆ ನಿಂತು ತಮ್ಮ ಪಾತ್ರಕ್ಕೆ ಸ್ವತಃ ವಿಹಾನ್ ಧ್ವನಿ ನೀಡಿದ್ದಾರೆ. ಈ ಕುರಿತು ಗೋಲ್ಡನ್ ಸ್ಟಾರ್ ಗಣೇಶ್ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
Vihaan dubbing for #Geetha movie,bless him 😊 #GoldenMovies #SSfilms
Audio soon @aanandaaudio pic.twitter.com/EiZRhZYHkp— Ganesh (@Official_Ganesh) August 1, 2019
ಚಮಕ್ ಚಿತ್ರದಲ್ಲಿ ಮಗಳು ಚಾರಿತ್ರ್ಯ ಅವರನ್ನು ಪರಿಚಯಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗೀತಾ ಚಿತ್ರದ ಮೂಲಕ ಮಗ ವಿಹಾನ್ ನ್ನು ಕೂಡ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಈ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದು, ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಬಂಡವಾಳ ಹೂಡಿದ್ದಾರೆ. ಇನ್ನು ಗೀತಾದಲ್ಲಿ ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಸೇರಿ ಮೂವರು ನಾಯಕಿಯರಿದ್ದಾರೆ. ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
No Comment! Be the first one.