ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಅಭಿನಯದ ರೂಪ ರಾವ್ ನಿರ್ದೇಶನದ ಚಿತ್ರ ಗಂಟು ಮೂಟೆ. ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವ ಈ ಸಿನಿಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನ್ಯೂಯಾರ್ಕ್ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಇತ್ತೀಚಿಗೆ ಪ್ರದರ್ಶನ ಕಂಡಿದ್ದ ಗಂಟು ಮೂಟೆ ಚಿತ್ರಕ್ಕೆ ಉತ್ತಮ ಚಿತ್ರಕತೆ ಪ್ರಶಸ್ತಿ ದೊರಕಿತ್ತು. ಅಲ್ಲದೇ ಒಟ್ಟಾವಾ ಭಾರತೀಯ ಚಿತ್ರೋತ್ಸವ ಪ್ರಶಸ್ತಿಗೆ ಕೂಡ ನಾಮಾಂಕಿತಗೊಂಡಿತ್ತು. ಸದ್ಯ ಕೆನಡಾದಲ್ಲಿ ಗಂಟು ಮೂಟೆ ಪ್ರದರ್ಶನ ಕಾಣಲಿದೆ.

ಇದೊಳ್ಳೆ ರಾಮಾಯಣ ಚಿತ್ರದಲ್ಲಿ ಪ್ರಕಾಶ್ ರೈ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೇಜು ಗಂಟು ಮೂಟೆ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿದ್ದಾರೆ. ನಿಶ್ಚಿತ್ ಕೊರೊಡಿ ನಾಯಕನಾಗಿ ಕಾಣಿಸಿಕೊಂಡಿರುವ ಗಂಟು ಮೂಟೆಯಲ್ಲಿ ಭಾರ್ಗವ್ ರಾಜು, ಸೂರ್ಯ ವಶಿಷ್ಟ, ಶರತ್ ಗೌಡ, ಶ್ರೀರಂಗ ಪ್ರಮುಖ ತಾರಾಂಗಣದಲ್ಲಿದ್ದಾರೆ. ಹೈಸ್ಕೂಲ್ ಮಕ್ಕಳ ಕಥೆಯನ್ನಾಧರಿಸಿದ ಚಿತ್ರದಲ್ಲಿ ಬೆಂಗಳೂರಿನಲ್ಲಿ 1990ರ ದಶಕದ ಚಿತ್ರಣವನ್ನು ತೋರಿಸಲಾಗಿದೆ. ಗಂಟುಮೂಟೆ ಚಿತ್ರಕ್ಕೆ ಅಮೆಯುಕ್ತಿ ಸ್ಟುಡಿಯೊಸ್ ಬಂಡವಾಳ ಹಾಕಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಟ್ರೆಂಡಿಂಗ್ ನಲ್ಲಿದೆ ರಶ್ಮಿಕಾ ಲೇಟೆಸ್ಟ್ ಪೋಟೋಗಳು!

Previous article

ಥ್ರಿಲ್ಲಿಂಗ್ ಜಾನರ್ ನ ಹೊಸ ಸಿನಿಮಾ `ಸಮಯದ ಹಿಂದೆ ಸವಾರಿ’!

Next article

You may also like

Comments

Leave a reply

Your email address will not be published. Required fields are marked *