ಚಿತ್ರರಂಗದಲ್ಲಿ ಯಾರೇ ಆಗಲಿ ಹೊಸ ಪ್ರಯತ್ನಗಳನ್ನು ಮಾಡಿದಾಗ ಅದನ್ನು ಮೆಚ್ಚಿ, ಎರಡು ಒಳ್ಳೇ ಮಾತುಗಳನ್ನಾಡುವುದು ಕಿಚ್ಚ ಸುದೀಪ ರೂಢಿಸಿಕೊಂಡುಬಂದಿರುವ ಗುಣ. ಇದು ಅವರ ದೊಡ್ಡತನವೆಂದರೂ ತಪ್ಪಾಗಲಾರದು.
ಮಹಿಳಾ ನಿರ್ದೇಶಕಿಯೊಬ್ಬರ ಚೊಚ್ಚಲ ನಿರ್ದೇಶನದ ಚಿತ್ರವಿದು.  ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಇದೇ ತಿಂಗಳ ಹದಿನೆಂಟಕ್ಕೆ ತೆರೆಗೆ ಬರುತ್ತಿದೆ. ರೂಪಾ ರಾವ್ ಈ ಹಿಂದೆ ಸುದೀಪ ಅಭಿನಯದ ವಿಷ್ಣುವರ್ಧನ ಚಿತ್ರದಲ್ಲಿ ಸಹ ನಿರ್ದೇಶಕಿಯಾಗುವ ಮೂಲಕ ಚಿತ್ರರಂಗಕ್ಕೆ ಬಂದಿದ್ದವರು. ಮೂಲತಃ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ನಂತರ ಅಮೆರಿಕಾದಲ್ಲಿ ನೆಲೆಸಿದ್ದ  ಅವರು ಸಿನಿಮಾ ವ್ಯಾಮೋಹದಿಂದ ಇರುವುದೆಲ್ಲವ ಬಿಟ್ಟು ಚಿತ್ರರಂಗಕ್ಕೆ ಕಾಲಿಟ್ಟವರು. ಈಗ ‘ಗಂಟುಮೂಟೆ ಎನ್ನು ನೈಜ ಸಿನಿಮವೊಂದನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರದ ಬಗ್ಗೆ ಸ್ವತಃ ಸುದೀಪ್ “ಗಂಟುಮೂಟೆ ಚಿತ್ರದ ಟ್ರೇಲರ್ ನೋಡಿದೆ. ತುಂಬಾನೇ ಇಷ್ಟವಾಯಿತು. ಸಣ್ಣ ತುಣುಕಾದರೂ, ಅಗಣಿತ ವಿಚಾರಗಳನ್ನು ಹೇಳುವಂತಿದೆ. ಇಂಥದ್ದೊಂದು ಚಿಂತನೆಯನ್ನು ಸಿನಿಮಾ ಮಾಡಿರುವ ಚಿತ್ರತಂಡಕ್ಕೆ ಶುಭವಾಗಲಿ… ಎಂದು ಟ್ವೀಟ್ ಮಾಡಿದ್ದಾರೆ.
CG ARUN

ಸ್ವಿಜರ್ಲ್ಯಾಂಡ್‌ಗೆ ಹೊರಟುನಿಂತ ಒಡೆಯ!

Previous article

ನೋಡಲೆರಡು ಕಣ್ಣು ಸಾಲದು…

Next article

You may also like

Comments

Leave a reply

Your email address will not be published. Required fields are marked *