ರಶ್ಮಿಕಾ ಮಂದಣ್ಣ ಯಜಮಾನ ಚಿತ್ರದ ಮೂಲಕ ಕನ್ನಡದಲ್ಲಿ ಗೆಲುವು ದಾಖಲಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ರಕ್ಷಿತ್ ಶೆಟ್ಟರ ವಿರಹದ ಆತ್ಮವನ್ನು ಆವಾಹಿಸಿಕೊಂಡಿರುವ ಕೆಲವರು ಮಾತ್ರ ಕಿರಿಕ್ ಹುಡುಗಿಯನ್ನು ನೆಮ್ಮದಿಯಿಂದಿರಲು ಬಿಡುತ್ತಿಲ್ಲ!
ಇಷ್ಟಾದರೂ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ನಟಿಸುತ್ತಿರೋ ರಶ್ಮಿಕಾ, ತಮಿಳಿನಲ್ಲಿ ಕಾರ್ತಿಕೇಯನ್ ಜೊತೆಗೊಂದು ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ಕೆಜಿಎಫ್ ವಿಲನ್ ಒಬ್ಬರೂ ನಟಿಸುತ್ತಿದ್ದಾರೆ!
ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಆರ್ಭಟಿಸಿದ್ದ ರಾಮ್ ಕಾರ್ತಿಕೇಯನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೆಜಿಎಫ್ನಲ್ಲಿ ಎಲ್ಲ ನಟರಂತೆ ರಾಮ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದರು. ಅವರು ತಮಿಳು ಚಿತ್ರದಲ್ಲಿ ಯಾವ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಕುತೂಹಲ ಎಲ್ಲರಲ್ಲಿಯೂ ಇದೆ.