ತ್ರಾಟಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ರಾಹುಲ್ ಐನಾಪುರ.ಮನೆಯ ತುಂಬಾ ರಾಜಕೀಯ ವಾತಾವರಣವಿದ್ದರೂ ಮನಸನ್ನು ಕಲೆಯ ವಶಕ್ಕೊಪ್ಪಿಸಿದ ವಿರಳ ವ್ಯಕ್ತಿ ರಾಹುಲ್. ತ್ರಾಟಕ ಚಿತ್ರದ ಮೂಲಕ ನಾಯಕ ನಟನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿದ್ದ ರಾಹುಲ್ ಐನಾಪುರ ಈ ನಟನೆಗೆ ಪೂರ್ತಿ ಸಮಯ ನೀಡಿದ್ದಾರೆ.
ತ್ರಾಟಕ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಾಹುಲ್ ಬಿಜಾಪುರದವರು. ಅವರದ್ದು ಪಕ್ಕಾ ರಾಜಕೀಯದ ಹಿನ್ನೆಲೆ ಇರುವ ಕುಟುಂಬ. ರಾಹುಲ್ ತಂದೆ ಮನೋಹರ ಐನಾಪುರ ಕಾಂಗ್ರೆಸ್ ನಾಯಕ, ಮಾಜೀ ಶಾಸಕ. ತಾಯಿ ವಸುಂಧರಾ ಐನಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಾ ಇದೀಗ ನಿವೃತ್ತರಾಗಿದ್ದಾರೆ.
ಈಗಾಗಲೇ ಶಿವಗಣೇಶ್ ನಿರ್ದೇಶನದ ಆದೃಶ್ಯ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರ ರಾಹುಲ್ ಈಗ ಶಿವಗಣೇಶ್ ಅವರೇ ನಿರ್ದೇಶಿಸುತ್ತಿರುವ ಗತ್ತು ಚಿತ್ರದ ಮೂಲಕ ಮತ್ತೊಮ್ಮೆ ಎಂಟ್ರಿ ಕೊಡುತ್ತಿದ್ದಾರೆ. ಗತ್ತು ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿತ್ತು. ನಿಜಕ್ಕೂ ಗತ್ತಿನಿಂದ ಕೂಡಿದೆ. ಸೀರಿಯಸ್ ಪಾತ್ರಗಳಿಗೆ ರಾಹುಲ್ ಐನಾಪುರ ಫಿಸಿಕ್ಕು, ನಟನೆ ಹೇಳಿಮಾಡಿಸಿದಂತಿದೆ. ಪೆಪ್ಪರ್ ಸಾಲ್ಟ್ ಲುಕ್ಕಲ್ಲಿ ರಾಹುಲ್ ಅವರನ್ನು ತೆರೆಮೇಲೆ ನೋಡೋದೇ ಚೆಂದ.
ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಯಾವುದೇ ಭಾಷೆಗೆ ಸರಿಹೊಂದುವ ಆಕರ್ಷಕ ಎತ್ತರ ರಾಹುಲ್ ಅವರದ್ದು. ಭವಿಷ್ಯದಲ್ಲಿ ರಾಹುಲ್ ನಿಸ್ಸಂದೇಹವಾಗಿ ನಟನಾಗಿ ಇಂಡಿಯಾ ಸಿನಿಮಾರಂಗದಲ್ಲಿ ಹೆಸರು ಮಾಡಲಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರುವ ಗತ್ತು ಚಿತ್ರದ ಫಸ್ಟ್ ಲುಕ್ ನೋಡಿದರೆ ಯಾರಿಗಾದರೂ ಸರಿ ಹಾಗನ್ನಿಸೋದು ನಿಜ!