ಈಗ ಬಿಡುಗಡೆಯಾಗಿರುವ ಗೀತಾ ಚಿತ್ರದ ಟ್ರೇಲರು ನೋಡಿದ ಪ್ರತಿಯೊಬ್ಬ ಕನ್ನಡಿಗರೂ, ಮಾತೃಭಾಷೆಯ ಮೇಲೆ ಒಲವಿರುವವರು ‘ಒಂದ್ಸಲ ಆದ್ರೂ ಗೀತಾ ಸಿನಿಮಾ ನೋಡಲೇಬೇಕು’ ಎಂದು ತೀರ್ಮಾನಿಸಿಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಭರ್ಜರಿ ಯಶಸ್ಸಿನ ಮಹಾ ಪರ್ವವೊಂದು ಬೇಷರತ್ತಾಗಿ ಪುನರಾಗಮನವಾಗಲಿದೆಯಾ? ಹೀಗೊಂದು ಅಚ್ಚರಿಯ ಪ್ರಶ್ನೆ ಹುಟ್ಟಲು ಕಾರಣವಾಗಿರೋದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೀತಾ ಸಿನಿಮಾ. ಕನ್ನಡ ನಾಡಿನಲ್ಲಿ ಗೀತಾ ಚಿತ್ರದ ಬಗ್ಗೆ ಸೃಷ್ಟಿಯಾಗಿರುವ ಕ್ರೇಜ಼್ ನೋಡಿದರೆ, ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದು ತಂದುಕೊಟ್ಟು ಭಾರೀ ದಾಖಲೆಯನ್ನೇ ಸೃಷ್ಟಿಸಿದ ಮುಂಗಾರು ಮಳೆಯ ಇತಿಹಾಸ ಪುನರಾವರ್ತನೆಯಾಗೋ ಸ್ಪಷ್ಟ ಸೂಚನೆ ಎದ್ದುಕಾಣುತ್ತಿದೆ. ಗೀತಾ ಸಿನಿಮಾದಲ್ಲಿ ಗಣೇಶ್ ಇದುವರೆಗೂ ಕಾಣಿಸಿಕೊಳ್ಳದ, ತೀರಾ ಭಿನ್ನ ಕ್ಯಾರೆಕ್ಟರು ನಿಭಾಯಿಸಿದ್ದಾರೆ.


ಗಣೇಶ್ ಬಾಯಲ್ಲಿ ಸ್ಪಷ್ಟ ಕನ್ನಡ ಕೇಳೋದೋ ಒಂಥರಾ ಹಿತ. ಇಂಥಾದ್ದರಲ್ಲಿ ಗಣಿ ಈ ಬಾರಿ ಕನ್ನಡ ಹೋರಾಟಗಾರನಾಗಿಯೇ ಪರದೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಬಿಡುಗಡೆಯಾಗಿರುವ ಗೀತಾ ಚಿತ್ರದ ಟ್ರೇಲರು ನೋಡಿದ ಪ್ರತಿಯೊಬ್ಬ ಕನ್ನಡಿಗರೂ, ಮಾತೃಭಾಷೆಯ ಮೇಲೆ ಒಲವಿರುವವರು ‘ಒಂದ್ಸಲ ಆದ್ರೂ ಗೀತಾ ಸಿನಿಮಾ ನೋಡಲೇಬೇಕು’ ಎಂದು ತೀರ್ಮಾನಿಸಿಬಿಟ್ಟಿದ್ದಾರೆ.


ಅದಕ್ಕೆ ತಕ್ಕಂತೆ ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗೀತಾ’ ಜನರನ್ನು ಥಿಯೇಟರಿಗೆ ಸೆಳೆಯುವ ಎಲ್ಲ ಗುಣಗಳನ್ನೂ ಹೊಂದಿದೆ. ಕಳೆದ ನಾಲ್ಕು ದಶಕಗಳನ್ನು ತೆರೆಮೇಲೆ ತರೋದೆಂದರೆ ಸುಲಭದ ಮಾತಲ್ಲ. ನಿರ್ಮಾಪಕರಾದ ಸೈಯದ್ ಸಲಾಂ ಮತ್ತು ಶಿಲ್ಪ ಗಣೇಶ್ ಅದನ್ನು ಸಾಧಿಸಿದ್ದಾರೆ. ಇತಿಹಾಸವನ್ನು ಮರುಸೃಷ್ಟಿಸಿದ್ದಾರೆ. ನಿಜಕ್ಕೂ ಇದು ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಆಗಿ ಮೂಡಿರುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಅದರ ಫಲಿತಾಂಶ ಇಂದೇ ಗೊತ್ತಾಗಲಿದೆ…


‘ಮಿಸ್ಟರ್ & ಮಿಸ್ಸಸ್ ರಾಮಾಚಾರಿ’ ಹಾಗೂ ‘ರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಬಿ.ಎಂ ಸಂಭಾಷಣೆ ಬರೆದಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಜ಼್ಞಾನೇಶ್ ಬಿ ಮಠದ್ ಸಂಕಲನ, ಶಿವಕುಮಾರ್, ವಿಶ್ವಾಸ್ ಕಶ್ಯಪ್ ಕಲಾ ನಿರ್ದೆಶನ, ವಿಜಯ್ ಮಾಸ್ಟರ್ ಹಾಗೂ ವಿನೋದ್ ಸಾಹಸ ನಿರ್ದೇಶನ ಮತ್ತು ಭೂಷಣ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.


ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯರಾಗಿ ಕೇರಳದ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವಾಸ್ತವ್ ಅಭಿನಯಿಸಿದ್ದಾರೆ. ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನೀನೆ ಮೊದಲು ನೀನೇ ಕೊನೆ!

Previous article

ತುಂಟ ತುಟಿಗಳ ಕಿತ್ತಾಟದ ನಡುವೆ ಕಿಸ್ ಕುದುರುತ್ತಾ?

Next article

You may also like

Comments

Leave a reply

Your email address will not be published. Required fields are marked *