99 ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಸಿನಿಮಾ ಗೀತಾ. ಈಗಾಗಲೇ ಬಗೆ ಬಗೆಯ ಫೋಟೋಗಳಿಂದ ಸುದ್ದಿಯಾಗಿದ್ದ ಗೀತಾ ಚಿತ್ರದ ಟೀಸರ್ ರಿಲೀಸ್ ಆಗುವ ಕಾಲ ಬಂದಿದೆ. ಹೌದು ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಗೀತಾ ಸಿನಿಮಾದ ಟೀಸರ್ ನ್ನು ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆಯಂತೆ.

ಒಂದೂವರೆ ನಿಮಿಷದ ಟೀಸರ್​ ಇದಾಗಿದ್ದು, ಅದರಲ್ಲಿ  ಒಂದಷ್ಟು ಹೊಸ ಅಂಶಗಳೊಂದಿಗೆ ಗಣೇಶ್ ಬೇರೆ ರೀತಿಯಲ್ಲಿಯೇ ಕಾಣಿಸಲಿದ್ದಾರೆ. ಅಲ್ಲದೆ, ಸೆಂಟಿಮೆಂಟಲಿ ಟಕ್ ಮಾಡುವ ಸೀನ್ ಗಳು ಇರಲಿದೆಯಂತೆ. ಶೂಟಿಂಗ್ ಮುಗಿಸಿಕೊಂಡಿರುವ ಗೀತಾ ತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅದು ಕಂಪ್ಲೀಟ್ ಆಗುತ್ತಿದ್ದಂತೆ ಎರಡು ಹಾಡುಗಳ ಚಿತ್ರೀಕರಣಕ್ಕೆ ಚಾಲನೆಯೂ ದೊರಕಲಿದೆ.  ಎಲ್ಲ ಅಂದುಕೊಂಡಂತಾದರೆ ಗೀತಾ ಬರುವ ಆಗಸ್ಟ್ ಗೆ ರಿಲೀಸ್ ಆಗುವ ಸಾಧ್ಯತೆಯೂ ಇದೆ. ಇನ್ನು ಗೀತಾ ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದು, ಗೋಲ್ಡನ್ ಮೂವೀಸ್ ಹೋಮ್ ಬ್ಯಾನರ್ ನಲ್ಲಿ ಗಣೇಶ್ ನಿರ್ಮಾಣ ಮಾಡಲಿದ್ದಾರೆ. ಅವರಿಗೆ ಮುಗುಳು ನಗೆ ನಿರ್ಮಿಸಿದ್ದ ಸೈಯಲ್ ಸಲಾಂ ಸಹ ಜತೆಯಾಗಿದ್ದಾರೆ. ಗೀತಾ ಚಿತ್ರದಲ್ಲಿ ಗಣೇಶ್ ಗೆ ಪಾರ್ವತಿ ಅರುಣ್, ಪ್ರಯಾಗ್, ಶಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ಸ್ಟೆಪ್ಪು ಹಾಕಿದ್ದಾರೆ. ಉಳಿದಂತೆ ಹಿರಿಯ ನಟ ದೇವರಾಜ್, ಸುಧಾರಾಣಿ, ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿ ಹಲವು ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದಶಕಗಳ ನಂತರ ಮತ್ತೆ ಒಂದಾಗಲಿದೆ ಥ್ರೀ ಈಡಿಯಟ್ಸ್ ಜೋಡಿ!

Previous article

ಅರೆನಗ್ನಗೊಂಡ ಅಮಿಶಾ!

Next article

You may also like

Comments

Leave a reply

Your email address will not be published. Required fields are marked *