ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಇನ್ನೇನು ಬಿಡುಗಡೆಯಾಗಲಿದೆ. ಸದ್ಯ ಗೀತಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಎಂಥವರ ಎದೆಯಲ್ಲೂ ಕನ್ನಡ ಪ್ರೇಮವನ್ನು ಬಿತ್ತುವಂತಿದೆ ಗೀತಾ ಟ್ರೇಲರು. ಈ ಟ್ರೇಲರ್ ನೋಡಿದವರ ಮನಸ್ಸಿನಲ್ಲಿ ‘ಗೀತಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ನಿರ್ಮಿಸಲಿದೆಯಾ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ.
https://youtu.be/ZcWgN4HRzeY
ಈ ವರೆಗೂ ಗೋಲ್ಡನ್ ಸ್ಟಾರ್ ಗಣೇಶ್ ಸಾಕಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಗೀತಾ ಗಣೇಶ್ ಪಾಲಿಗೆ ಬೇರೆಯದ್ದೇ ಇಮೇಜನ್ನು ಸೃಷ್ಟಿಸುವ ಸಾಧ್ಯತೆ ಈ ಟ್ರೇಲರು ಸೂಚಿಸಿದೆ.
ಭಾಷೆನ ನಾವು ಬೆಳೆಸೋಕಾಗಲ್ಲ, ಭಾಷೆ ನಮ್ಮನ್ನು ಬೆಳೆಸುತ್ತೆ. ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ ಎಂಬಿತ್ಯಾದಿ ಮಾತುಗಳನ್ನು ಗಣೇಶ್ ನುಡಿಯುತ್ತಿರುವುದು ನೋಡಿದರೆ  ಕನ್ನಡಿಗರು ಅನ್ನಿಸಿಕೊಂಡ ಯಾರಿಗಾದರೂ ಒಂದು ಕ್ಷಣ ನರನಾಡಿಗಳಲ್ಲಿ ರೋಮಾಂಚನವಾಗುತ್ತದೆ. ಸಿನಿಮಾದ ಬಣ್ಣ, ಮೇಕಿಂಗ್, ಸಂಕಲನ ಎಲ್ಲವೂ ಬೇರೆಯದ್ದೇ ರೀತಿಯಲ್ಲಿ ಬಂದಿದೆ ಅನ್ನೋದರ ಸ್ಯಾಂಪಲ್ಲು ಈ ಟ್ರೇಲರಿನಲ್ಲಿದೆ.
ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಗೋಲ್ಡನ್ ಸ್ಟಾರ್ ಹೋಂ ಬ್ಯಾನರಿನಲ್ಲಿಯೇ ಗೀತಾ ಚಿತ್ರ ರೂಪುಗೊಂಡಿದೆ. ಈ ಚಿತ್ರದಲ್ಲಿ ಗಣೇಶ್ ಕನ್ನಡ ಪರ ಹೋರಾಟಗಾರನಾಗಿಯೂ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಗೋಕಾಕ್ ಚಳುವಳಿಯನ್ನು ಮರು ಸೃಷ್ಟಿಸುವ ಸವಾಲನ್ನು ಕೂಡಾ ಸ್ವೀಕರಿಸಲಾಗಿದೆ. ಅದಕ್ಕೆ ಅನುಗುಣವಾಗಿಯೇ ಈ ಹಾಡು ಮೂಡಿ ಬಂದಿದೆ. ಬಿಡುಗಡೆ ರೆಡಿಯಾಗಿರೋ ಈ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್, ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ನಾಯಕಿಯರಾಗಿ ಗಣೇಶ್ ಗೆ ಜೊತೆಯಾಗಿದ್ದಾರೆ
ಒಟ್ಟಾರೆಯಾಗಿ ಗೀತಾ ಬರಿಯ ಸಿನಿಮಾವಾಗಿ ಮಾತ್ರವಲ್ಲದೆ, ಕನ್ನಡಿಗರ ಮನಸ್ಸಿನಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ, ಕರ್ನಾಟಕದಲ್ಲಿ ಕ್ರಾಂತಿ ಮಾಡುವ ಸಾಧ್ಯತೆಯೇ ಹೆಚ್ಚು ಗೋಚರಿಸುತ್ತಿದೆ.
CG ARUN

ಅಗ್ನಿಯಿಂದ ಎಗರಿ ಹಳ್ಳಕ್ಕೆ ಬಿದ್ದ ವಿಜಯ್ ಸೂರ್ಯ

Previous article

ಸಲ್ಲು ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಕನ್ನಡದ ಪೋಸ್ಟರ್!

Next article

You may also like

Comments

Leave a reply

Your email address will not be published. Required fields are marked *